ಸಕಲೇಶಪುರ : ನದಿಗೆ ಹಾರಿ ಯುವತಿ ಆತ್ಮಹತ್ಯೆ
ಕ್ಷುಲಕ ಕಾರಣಕ್ಕೆ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಪೂಜಾ (20) ವರ್ಷ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು ಮೂಲತ:ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ತಾಲೂಕಿನ ಶ್ರವಣಬೆಳಗೋಳ ಹೋಬಳಿ ಚೋಳನಹಳ್ಳಿ ಸಮೀಪದ ಬೆಕ್ಕ ಗ್ರಾಮದ ಕೆಂಪೇಗೌಡ ಹಾಗೂ ಜಯಮ್ಮ ಎಂಬುವರ ಪುತ್ರಿ ಎಂದು ತಿಳಿದು ಬಂದಿದೆ. ಇನ್ನು ಘಟನೆಗೆ ಸಂಬಂಧಿಸಿ ಯುವತಿಯ ಸಂಬಂಧಿಕರು ಯುವಕನ ಕುಟುಂಬದವರು ಯುವತಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಸಕಲೇಶಪುರದಲ್ಲಿ ಪಟ್ಟಣ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.