ಸಕಲೇಶಪುರ: ನೊಂದ ಮಹಿಳೆ ಮಗುವನ್ನು ಕೊಂದು ತಾನು ಆತ್ಮಹತ್ಯೆ

ಸಕಲೇಶಪುರ: ತಾಲೂಕಿನ ಆನೇಮಹಲ್ ಗ್ರಾಮದಲ್ಲಿ ಮರುಮದುವೆಯಿಂದ ನೊಂದ ಮಹಿಳೆಯೊಬ್ಬರು ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗ್ರಾಮದ ಮೋಹನ್ ಎಂಬುವವರ ಪತ್ನಿ ಪ್ರಜ್ವಲ(26) ಹಾಗೂ ಎರಡುವರೆ ವರ್ಷದ ಪುತ್ರಿ ಸಾಧ್ವಿ ಆತ್ಮಹತ್ಯೆಗೀಡಾದವರು.

ಮಹಿಳೆಯ ಪತಿ ಮೋಹನ್ ಮನೆಯಿಂದ ಹೊರಹೋದ ನಂತರ ಮನೆಯ ಪ್ಯಾನಿಗೆ ಮಗುವನ್ನು ಸೀರೆಯಿಂದ ನೇಣು ಹಾಕಿ ಮತ್ತೊಂದು ಸೀರೆಯಿಂದ ತಾನು ಅದೇ ಪ್ಯಾನ್‌ಗೆ ನೇಣು ಬೀಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಪತಿ ಮೋಹನ್ ಮೊಬೈಲ್‌ಗೆ ಕರೆಮಾಡಿದಾಗ ಕರೆಸ್ವೀಕರಿಸದ ಕಾರಣ ನೆರೆಮನೆಗೆ ಕರೆಮಾಡಿ ಮನೆಕಡೆ ಗಮನಿಸುವಂತೆ ತಿಳಿಸಿದ್ದು. ಈ ವೇಳೆ ನೆರೆಮನೆಯವರು ಕಿಟಿಕಿ ತೆಗೆದು ಗಮನಿಸಿದ ವೇಳೆ ವಿಚಾರ ಬೆಳಕಿಗೆ ಬಂದಿದೆ.

ಘಟನೆ ಹಿನ್ನಲೆ: ಮೃತ ಪ್ರಜ್ವಲ್ ಹಾಗೂ ಮೋಹನ್‌ಗೆ ಇದು ಎರಡನೇ ಮದುವೆಯಾಗಿದ್ದು ಪಜ್ವಲ್ ಮೊದಲ ಪತಿ ಕಳೆದ ಎರಡು ವರ್ಷದ ಹಿಂದೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಮೋಹನ್ ಪತ್ನಿ ಕಳೆದ ಮೂರು ತಿಂಗಳ ಹಿಂದೆ ಹೆರಿಗೆ ವೇಳೆ ಮೃತಪಟ್ಟಿದ್ದರು. ಇದರಿಂದಾಗಿ ಹಿರಿಯರು ಸೇರಿ ಕಳೆದ ಬುದುವಾರ ಇಬ್ಬರಿಗೂ ಪಜ್ವಲ ತವರು ಮನೆಯಾದ ಹಡ್ಲಹಳ್ಳಿ ಗ್ರಾಮದಲ್ಲಿ ಮದುವೆ ಮಾಡಿದ್ದು ಹಿರಿಯ ಗಂಡನ ಪುತ್ರಿಯನ್ನು ಕರೆದುಕೊಂಡು ಶುಕ್ರವಾರ ಗಂಡನ ಮನೆಗೆ ಬಂದಿದ್ದರು.ಇವರು ಸಂಬಂದಿಕರು ಹೇಳುವ ಪ್ರಕಾರ ಮೃತ ಮಹಿಳೆ ನನಗೆ ಮರುಮದುವೆ ಬೇಡ ಎನ್ನತಿದ್ದರು. ಆದರೆ, ಭವಿಷ್ಯದ ಬಗ್ಗೆ ತಿಳಿಹೇಳಿ ಹಿರಿಯರು ಮದುವೆ ಮಾಡಿದ್ದರು ಎನ್ನಲಾಗುತಿದೆ. ಕ್ರಾಫರ್ಡ್ ಆಸ್ಪತ್ರೆ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

Related Posts

Leave a Reply

Your email address will not be published.