ಸಹಕಾರ ಸಚಿವಾಲಯ ಸ್ಥಾಪಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ: ಎಸ್.ಆರ್. ಸತೀಶ್ಚಂದ್ರ

ಸುಮಾರು 117 ವರ್ಷಗಳ ಇತಿಹಾಸವಿರುವ ಸಹಕಾರ ಕ್ಷೇತ್ರಕ್ಕೆ ಸಹಕಾರ ಸಚಿವಾಲಯ ಬೇಕು ಎನ್ನುವ ಬೇಡಿಕೆಯನ್ನು ಕೇಂದ್ರ ಸರ್ಕರ ಪರಿಗಣಿಸಿ ಸಹಕಾರದಿಂದ ಸಮೃದ್ಧಿ ಎನ್ನುವ ಘೋಷವಾಕ್ಯದೊಂದಿಗೆ ಸಹಕಾರ ಸಚಿವಾಲಯವನ್ನು ರಚಿಸಿರುವ ಕೇಂದ್ರ ಸರ್ಕಾರಕ್ಕೆ ಸಹಕಾರಿಗಳ ಪರವಾಗಿ ಧನ್ಯವಾದವನ್ನು ತಿಳಿಸುತ್ತೇನೆ ಎಂದು ಸಹಕಾರ ಭಾರತಿಯ ಕರ್ನಾಟಕದ ರಾಜ್ಯಾಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.

ಅವರು ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೊಷ್ಟಿ ನಡೆಸಿ ಮಾತನಾಡಿ ನಮ್ಮ ದೇಶದಲ್ಲಿ ಸುಮಾರು ಎಂಟುವರೆ ಲಕ್ಷದಷ್ಟು ಸಹಕಾರಿ ಸಂಸ್ಥೆಗಳಿವೆ. ಸುಮಾರು 30 ಕೋಟಿಗಿಂತಲೂ ಹೆಚ್ಚು ಸಹಕಾರಿ ಸದಸ್ಯರಿದ್ದಾರೆ. ಸುಮಾರು 55 ರೀತಿಯ ಸಹಕಾರಿ ಸಂಸ್ಥೆಗಳಿವೆ. ಸುಮಾರು 3 ರೀತಿಯ ಕಾಯಿದೆಗಳಿದೆ. ಸುಮಾರು 117 ವರ್ಷಗಳ ಇತಿಹಾಸವು ಇದೆ ನಮಗೂ ಸಹಕಾರ ಸಚಿವರು ಬೇಕು ಸಹಕಾರ ಸಚಿವಾಲಯ ಬೇಕು ಎರನ್ನುವುದು ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಇದನ್ನು ಪರಿಗಣಿಸಿ ಸಹಕಾರದಿಂದ ಸಮೃದ್ಧಿ ಎನ್ನುವ ಘೋಷವಾಕ್ಯದೊಂದಿಗೆ ಸಹಕಾರ ಸಚಿವಾಲಯವನ್ನು ರಚಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾರವರರಿಗೆ ಸಹಕಾರಿಗಳ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭ ಸಹಕಾರ ಭಾರತಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಭಾರತಿ ಜಿ.ಭಟ್, ಸಹಕಾರ ಭಾರತಿಯ ಮಹಿಳಾ ಪ್ರಮುಖರಾದ ಸುಮನಾ ಶರಣ್, ಸಯುಕ್ತ ಸಹಕಾರಿಯ ಅಭಿವೃಧ್ದಿ ಅಧಿಕಾರಿ ಗುರುಪ್ರಸಾದ್ ಬಂಗೇರಾ ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.