ಸಿಎ ಪರೀಕ್ಷೆಯಲ್ಲಿ ರುಥ್ ಕ್ಲೇರ್ ಡಿ ಸಿಲ್ವ ಪ್ರಥಮ ರ್‍ಯಾಂಕ್
ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ಜುಲೈಯಲ್ಲಿ ನಡೆಸಿದ ಅಖೀಲ ಭಾರತ ಸಿಎ ಅಂತಿಮ ಪರೀಕ್ಷೆಯಲ್ಲಿ ನಗರದ ರುಥ್ ಕ್ಲೇರ್ ಡಿ’ಸಿಲ್ವ ಅವರು ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.
ನಗರದ ಮಲ್ಲಿಕಟ್ಟೆ ನಿವಾಸಿ ರುಥ್ ಅವರು ರೋಸಿ ಮರಿಯಾ ಡಿ’ಸಿಲ್ವ ಮತ್ತು ರಫೆರ್ಟ್ ಡಿ’ಸಿಲ್ವ ಅವರ ಪುತ್ರಿ. ನಗರದ ಸಂತ ತೆರೆಸಾ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದು ಮಂಗಳೂರು ವಿ.ವಿ.ಯಿಂದ ದೂರ ಶಿಕ್ಷಣ ಮೂಲಕ ಪದವಿ ಪೂರ್ಣಗೊಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ರ್‍ಯಾಂಕ್ ಪಡೆದ ರುಥ್ ಕ್ಲೇರ್ ಡಿ ಸಿಲ್ವ ಸಿಎ ಪರೀಕ್ಷೆ ಕಠಿಣವಾಗಿತ್ತು. ನಿರಂತರ ಪರಿಶ್ರಮ ಮತ್ತು ಪ್ರಯತ್ನದಿಂದ ದೇಶದಲ್ಲಿಯೇ ಮೊದಲ ರ್‍ಯಾಂಕ್ ಪಡೆಯಲು ಸಾಧ್ಯವಾಗಿದೆ. ಫಲಿತಾಂಶ ಬಂದಾಗ ಆಶ್ಚರ್ಯಗೊಂಡು ಎರಡು- ಮೂರು ಬಾರಿ ಪರಿಶೀಲಿಸಿದೆ. ರ್‍ಯಾಂಕ್ ಪಡೆಯಲು ಹೆತ್ತವರ ಪ್ರೋತ್ಸಾಹ ಸಹಕಾರಿಯಾಗಿದೆ. ಸಂಭ್ರಮವನ್ನು ಹೆತ್ತವರೊಂದಿಗೆ ಹಂಚಿಕೊಂಡು ಖುಷಿಪಟ್ಟೆ ಎಂದು ಹೇಳಿದರು.