ಸಿಲಂಬಂ ಸ್ಪರ್ಧೆಯಲ್ಲಿ ವೆನಿಲ್ಲಾ ಮಣಿಕಂಠರವರಿಗೆ ಚಿನ್ನದ ಪದಕ

ಬಂಟ್ವಾಳ: ವಿಶಾಖಪಟ್ಟಂನಲ್ಲಿ ಅ.21 ಮತ್ತು 22 ರಂದು ನಡೆದ ರಾಷ್ಟ್ರೀಯ ಮಟ್ಟದ ಪ್ರಾಚೀನ ಯುದ್ಧ ವಿದ್ಯೆ ಸಿಲಂಬಂ ಸ್ಪರ್ಧೆಯಲ್ಲಿ ವೆನಿಲ್ಲಾ ಮಣಿಕಂಠ ಅವರು ಭಾಗವಹಿಸಿ ಡಬಲ್ ಸ್ಟಿಕ್ ಹಾಗೂ ವಾಲ್ ವೀಚು ವಿಭಾಗದಲ್ಲಿ 2 ಚಿನ್ನದ ಪದಕವನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಅಲ್ಲದೆ ಮುಂದಿನ ಅಂತರಾಷ್ಟೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವೆನಿಲ್ಲಾ ಮಣಿಕಂಠ ಅವರು ಪ್ರಸಕ್ತ ಮಂಗಳೂರಿನ ಎನ್‌ಐಟಿಕೆಯಲ್ಲಿ ಎಂಟೆಕ್ ವ್ಯಾಸಂಗ ಮಾಡಿತ್ತಿದ್ದು ರಾಜೇಶ್ ಬ್ರಹ್ಮರಕೂಟ್ಲು ಅವರ ಶಿಷ್ಯೆಯಾಗಿದ್ದಾರೆ. ಮುಡಿಪು ಹೂಹಾಕುವಕಲ್ಲುವಿನ ಸುಮತಿ ಹಾಗೂ ನೀಲಕಂಠ ದಂಪತಿಗಳ ಪುತ್ರಿಯಾಗಿರುವ ಇವರು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ತರಬೇತಿ ಕೇಂದ್ರದಲ್ಲಿ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ ಕರಾಟೆ, ಜೂಡೋ, ಸಿಲಂಬಂ ಮೊದಲಾದ ಮಾರ್ಷಲ್ ಆರ್ಟ್ಸ್ ಅನ್ನು ತರಬೇತಿ ನೀಡತ್ತಿದ್ದಾರೆ. ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿಗಳು ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

 

Related Posts

Leave a Reply

Your email address will not be published.