ಸುಳ್ಯದ ಅವಿನಾಶ್ ಬಸ್ ಗಳ ಮಾಲಕ ನಾರಾಯಣ ರೈ ಆತ್ಮಹತ್ಯೆ

ಕೆಲ ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸುಳ್ಯದ ಅವಿನಾಶ್ ಬಸ್ ಗಳ ಮಾಲಕ ನಾರಾಯಣ ರೈ (73) ಕಳೆದ ರಾತ್ರಿ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.ಮಾನಸಿಕವಾಗಿ ತೀವ್ರ ನೊಂದಿದ್ದರೆನ್ನಲಾಗಿದೆ. ಕಳೆದ ರಾತ್ರಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಸುಳ್ಯದ ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯ ಇಲ್ಲದಂತಹ ಸಂದರ್ಭದಲ್ಲಿ ಅಂದರೆ 80ರ ದಶಕದಲ್ಲಿ ನಾರಾಯಣ ರೈ ಬಸ್ ಸೇವೆಯನ್ನು ಆರಂಭಿಸಿ ಗ್ರಾಮೀಣ ಭಾಗದಲ್ಲಿ ಬಸ್ ಓಡಾಡುವಂತೆ ಮಾಡಿದ್ದರು. ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ತೆರಳುವ ಜನರ ದೈನಂದಿನ ಜೀವನದಲ್ಲಿ ಇವರ ಅವಿನಾಶ್ ಬಸ್‌ ಜೀವನಾಡಿಯೇ ಆಗಿವೆ. ಸುಳ್ಯ ಮಂಡೆಕೋಲು ಸುಳ್ಯ ತೂಡಿಕಾನ ಸುಳ್ಯ ಪಾಣತ್ತೂರು ಸುಳ್ಯ ಕಡಬ ಸುಳ್ಯ ಮರ್ಕಂಜ ಹಲವು ಮಾರ್ಗಗಳಲ್ಲಿ ಇವರ ಅವಿನಾಶ್ ಬಸ್ ಗಳು ಓಡಾಟ ನಡೆಸುತ್ತಿವೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರರು ಸಹೋದರರನ್ನು ಅಗಲಿದ್ದಾರೆ.

Related Posts

Leave a Reply

Your email address will not be published.