ಸುಳ್ಯ ಸಹಾಯಿ ತಂಡದ ವತಿಯಿಂದ ಬೆಳ್ಳಾರೆಯಲ್ಲಿ ಸ್ಯಾನಿಟೈಸರ್ ಸಿಂಪಡಣೆ
ಬೆಳ್ಳಾರೆ:-ಎಸ್.ವೈ.ಎಸ್. ಎಸ್ಸೆಸ್ಸೆಫ್ ಬೆಳ್ಳಾರೆ ಶಾಖೆ ಮತ್ತು ಇಸಾಬ ಟೀಂ ಹಾಗೂ ಸುಳ್ಯ ಸಹಾಯಿ ತಂಡದ ವತಿಯಿಂದ ಬೆಳ್ಳಾರೆಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ನಡೆಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಳ್ಳಾರೆಯ ವಿವಿಧ ಕಡೆಗಳಲ್ಲಿ ಸ್ಯಾನಿಟೈಸೇಶನ್ ನಡೆಸಲಾಯಿತು. ಅಂಗಡಿ ಮುಂಗಟ್ಟುಗಳ ಮುಂಭಾಗ,ಸರಕಾರಿ ಕಛೇರಿ,ಆಸ್ಪತ್ರೆ ಪರಿಸರ,ಶಾಲಾ ವಠಾರ,ಪಂಚಾಯತ್ ಕಛೇರಿ,ಬಸ್ಸ್ಟಾಂಡ್,ಕಂಟೈನ್ ಮೆಂಟ್ ಝೋನ್ ಹಾಗೂ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಸ್ಯಾನಿಟೈಸೇಶನ್ ಮಾಡಲಾಯಿತು.
ದಾರುಲ್ ಹಿಕ್ಮಾ ಅಧ್ಯಕ್ಷರಾದ ಹಸನ್ ಸಖಾಫಿ ಉಸ್ತಾದರು ಪ್ರಾರ್ಥನೆಗೈದರು.ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರಾದ ಅಬ್ದುರ್ರಹ್ಮಾನ್ ಮೊಗರ್ಪಣೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪಂಚಾಯತ್ ಅಧ್ಯಕ್ಷರು ಚಂದ್ರಶೇಖರ ಪನ್ನೆ, ಬೆಳ್ಳಾರೆ ಠಾಣಾ ಎಸ್.ಐ ಆಂಜನೇಯ ರೆಡ್ಡಿ , ,ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಬೆಳ್ಳಾರೆ ರವರು ಸಂಘಟನಾ ಕಾರ್ಯವೈಖರಿಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿಎಸ್.ವೈ.ಎಸ್ ಬೆಳ್ಳಾರೆ ಬ್ರಾಂಚ್ ಅಧ್ಯಕ್ಷರು ಮಹ್ಮೂದ್ ಬೆಳ್ಳಾರೆ, ಎಸ್.ವೈ.ಎಸ್ ದ.ಕ ಜಿಲ್ಲಾ ಈಸ್ಟ್ ಸದಸ್ಯರಾದ ಶಂಸುದ್ದೀನ್ ಝಂಝಂ,ಹನೀಫ್ ಹಾಜಿ ಇಂದ್ರಾಜೆ, ಎಸ್ಸೆಸ್ಸೆಫ್ ದ.ಕ ಈಸ್ಟ್ ಸದಸ್ಯ ಕಲಾಂ ಝುಹ್ರಿ, ಬೆಳ್ಳಾರೆ ಮತ್ತು ಎಸ್.ವೈ.ಎಸ್ ನಾಯಕರಾದ ಹಸೈನಾರ್ ಗುತ್ತಿಗಾರು, ಮುಸ್ತಫಾ ಮಾಸ್ತಿಕಟ್ಟೆ, ಹಮೀದ್ ಆಲ್ಫಾ, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ನಾಯಕರಾದ ನೌಶಾದ್ ಕೆರೆಮೂಲೆ, ಶರೀಫ್ ಜಯನಗರ, ಎಸ್ಸೆಸ್ಸೆಫ್ ಬೆಳ್ಳಾರೆ ಶಾಖಾ ಅಧ್ಯಕ್ಷ ನೌಷಾದ್ ಅಹ್ಸನಿ, ಕಾರ್ಯದರ್ಶಿ ನವಾಝ್ ಹಾಗೂ ಶಾಫಿ, ಖದೀರ್, ರವೂಫ್ ಪಾಲ್ತಾಡ್, ಖಲೀಲ್, ಇರ್ಫಾನ್, ಸಾಬಿತ್, ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.