ಸೂಪರ್ ಹಿಟ್ಸ್ 93.5 ರೆಡ್ ಎಫ್.ಎಂ : “ನಾನ್ ಸ್ಟಾಪ್ 8 ಹಾಡುಗಳ ಸರಮಾಲೆ”
ಭಾರತದಲ್ಲಿ ಅತಿ ಹೆಚ್ಚು ಅವಾರ್ಡ್ ಗಳನ್ನು ಪಡೆದಿರುವ ಅತೀ ದೊಡ್ಡ ರೇಡಿಯೋ ನೆಟ್ವರ್ಕ್ ,93.5 ರೆಡ್ ಎಫ್ ಎಂ . ಮೈಸೂರು ಮಂಗಳೂರು, ಹುಬ್ಬಳ್ಳಿ-ಧಾರವಾಡ, ಹಾಗೂ ಕಲಬುರ್ಗಿ ನಗರಗಳಲ್ಲಿ ಪ್ರಸ್ತುತಪಡಿಸುತ್ತಿದೆ “ನಾನ್ ಸ್ಟಾಪ್ 8 ಹಾಡುಗಳ ಸರಮಾಲೆ”.
ಕೇಳುಗರಿಗೆ ಅತಿ ಹೆಚ್ಚು sಸೂಪರ್ ಹಿಟ್ ಹಾಡುಗಳನ್ನು ದಿನ ಪೂರ್ತಿ ಪ್ರಸಾರ ಮಾಡುವ ಸಲುವಾಗಿ ಈ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದೆ. ನಾನ್ ಸ್ಟಾಪ್ 8 ಹಾಡುಗಳನ್ನು (8 ಹಾಡುಗಳ ಸರಮಾಲೆಯಾಗಿ ) ಪ್ರಸಾರ ಮಾಡುವ ಏಕೈಕ ರೇಡಿಯೋ ಸ್ಟೇಷನ್ ಎನ್ನುವ ಹೆಗ್ಗಳಿಕೆ ಸೂಪರ್ ಹಿಟ್ಸ್ 93.5 ರೆಡ್ ಎಫ್ ಎಂ ಪಾತ್ರವಾಗಿದೆ.
ಕೇಳುಗರ ಮನೋರಂಜನೆಯೇ ರೆಡ್ ಎಫ್‍ಎಂ ನ ಜೀವಾಳ ಅಂತೆಯೇ ಹಲವು ಜನಪರ ಕಾಳಜಿ, ಮಾಹಿತಿ ಆಧಾರಿತ ಹಾಗು ಮನೋರಂಜನಾ ಕಾರ್ಯಕ್ರಮಗಳನ್ನು ಯಶಸ್ವೀಯಾಗಿ ನೀಡುತ್ತಾ ಬಂದಿರು ರೆಡ್ ಎಫ್‍ಎಮ್ ಈಗ ನಾನ್ ಸ್ಟಾಪ್ 8 ಹಾಡುಗಳ ಸರಮಾಲೆ -ಚಲನಚಿತ್ರ ಗೀತೆಗಳನ್ನು ಕೇಳಲು ಇಚ್ಚಿಸುವ ಪ್ರತಿಯೊಬ್ಬರಿಗೂ 8 ಹಾಡುಗಳ ರಸದೌತಣ ವನ್ನು ನೀಡುತ್ತದೆ ಅಂತೆಯೇ 8 ಹಾಡುಗಳ ಸರಮಾಲೆ ಕೇಳುಗರ ಸಂಭ್ರಮ ಹೆಚ್ಚಿಸಿ ಮನೋರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
8ರ ನಂಟು ಗಟ್ಟಿ ಆಗಲೆಂದು ರೆಡ್ ಎಫ್‍ಎಮ್‍ನ ನಾನ್ ಸ್ಟಾಪ್ 8 ಹಾಡುಗಳ ಸರಮಾಲೆಯನ್ನು ಇದೆ ಆಗಸ್ಟ್ 8 ರಂದು ಬೆಳ್ಳಿಗೆ 8 ರಿಂದ ಪ್ರಾರಂಭಿಸಲಾಗಿದೆ. .ಸಂಗೀತ ನಿರ್ದೇಶಕರಾದ ಶ್ರೀ ಅರ್ಜುನ್ ಜನ್ಯ ,ಹಿನ್ನಲೆ ಗಾಯಕರಾದ ಶ್ರೀ.ವಿಜಯ ಪ್ರಕಾಶ್ ,ಶ್ರೀಮತಿ ಅನುರಾಧ ಭಟ್, ವಿ ಮನೋಹರ್ ಮತ್ತಿತರ ಸಂಗೀತ ಲೋಕದ ಗಣ್ಯರು ಹಾಗು ಸಂಗೀತ ಪ್ರಿಯರು ಶುಭ ಹಾರೈಸಿದ್ದು ವಿಶೇಷವಾಗಿದೆ.
“ಕೇಳುಗರ ಮನೋರಂಜನೆ ನಮ್ಮ ಆದ್ಯತೆ ಕೊರೊನದ ಅಟ್ಟಹಾಸದ ನಡುವೆ ನಮ್ಮ 8 ಹಾಡುಗಳ ಸರಮಾಲೆ ನಮ್ಮ ಜನರಿಗೆ ಸ್ವಲ್ಪ ನೆಮ್ಮದಿಯನ್ನು ತರುವುದೆಂದು ನಾವು ಆಶಿಸುತ್ತೇವೆ .ಸಂಗೀತದ ಮೇಲೆ ಪ್ರೀತಿ ಒಲವು ಸ್ವಾಭಾವಿಕ,ರೇಡಿಯೋ ವಾಹಿನಿಯಾದ ನಾವು ಕೇಳುಗರಿಗೆ ಆಯ್ದ ಸುಮಧುರವಾದ 8 ನಾನ್ ಸ್ಟಾಪ್ ಹಾಡುಗಳ ಸರಮಾಲೆಯನ್ನು ನೀಡುತ್ತಿದ್ದೇವೆ. ಪ್ರಾಯಶ ಪ್ರತಿ ಘಂಟೆಯೂ ಪ್ರಸಾರವಾಗುವ ಈ ಸರಮಾಲೆಯ ನಮ್ಮ ಈ ಕೊಡುಗೆ ಮೈಸೂರು ಮಂಗಳೂರು ಹುಬ್ಬಳಿ ಧಾರವಾಡದ ಹಾಗೂ ಕಲಬುರ್ಗಿಯ ಜನರಿಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೆವೆ.” ಎಂದು ಶ್ರೀ.ಸುರೇಂದರ್ (ಸಿಒಒ ಆಂಡ್ ಡೈರೆಕ್ಟರ್ ರೆಡ್ ಎಫ್‍ಎಮ್ ನೆಟ್ವಾರ್ಕ್) ಹೇಳಿದರು.