ಸೆಲ್ಫಿ ತೆಗೆಯಲು ನದಿಗೆ ಇಳಿದ ಯುವಕ ನೀರುಪಾಲು
ಕಡಬ: ವಾಹನ ನಿಲ್ಲಿಸಿ ನದಿಯ ಬಂಡೆಯಲ್ಲಿ ಸೆಲ್ಫೀ ತೆಗೆಯಲು ಮುಂದಾದ ಯುವಕನೋರ್ವ ನೀರಲ್ಲಿ ಮುಳುಗಿ ಕಣ್ಮರೆಯಾದ ಘಟನೆ ಕಡಬ ತಾಲೂಕಿನ ನೆಲ್ಯಾಡಿ, ಗುಂಡ್ಯ ಸಮೀಪದಲ್ಲಿ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ನೀರಲ್ಲಿ ಮುಳುಗಿದ ಯುವಕನನ್ನು ರಾಜಸ್ಥಾನ ಮೂಲದ ಸೀತಾರಾಮ್ ಎಂದು ತಿಳಿದು ಬಂದಿದೆ.ಇಬ್ಬರು ಯುವಕರು ತಮ್ಮ ಆಟೋಮೊಬೈಲ್ ಸ್ಪೇರ್‍ಪಾಡ್ಸ್ ಪಾರ್ಸಲ್ ಸಾಗಾಟದಟೆಂಪೊವಾಹನವನ್ನು ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ನಿಲ್ಲಿಸಿ ಗುಂಡ್ಯ ಹೊಳೆಯ ಬಂಡೆಯೊಂದರ ಮೇಲೆ ಸೆಲ್ಫೀ ತೆಗೆಯಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯ ಸಾರ್ವಜನಿಕರು ನದಿಯಲ್ಲಿ ಹುಡುಕಾಟ ನಡೆಸಿದರು ಯುವಕನ ಪತ್ತೆಯಾಗಿಲ್ಲ.ಈ ಪ್ರದೇಶದಲ್ಲಿ ಅತಿಯಾಗಿ ಕತ್ತಲು ಆವರಿಸಿರುವ ಹಿನ್ನೆಲೆಯಲ್ಲಿ ಮತ್ತು ಈ ಸ್ಥಳವು ಅತ್ಯಂತ ಅಪಾಯಕಾರಿ ಆಗಿರುವ ಕಾರಣದಿಂದಾಗಿ ನದಿಯಲ್ಲಿನ ಹುಡುಕಾಟ ಸದ್ಯ ನಿಲ್ಲಿಸಲಾಗಿದ್ದು, ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾಧಿಕಾರಿ ಕುಮಾರ್ ಕಾಂಬ್ಲೇ ನೇತೃತ್ವದಲ್ಲಿ ಪೊಲೀಸರ ತಂಡವು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.