ಸ್ಟ್ಯಾನ್ ಸ್ವಾಮಿಗೆ ನ್ಯಾಯ ಒದಗಿಸುವಂತೆ ವಿನೋದ್ ವಾಲ್ಟರ್ ಪಿಂಟೊ ಒತ್ತಾಯ
ಮೂಡುಬಿದಿರೆ: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಜೈಲು ಸೇರಿ ಕಾನೂನು ಹೋರಾಟ ನಡೆಸುತ್ತಿರುವಾಗಲೇ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟ ಧರ್ಮಗುರು, ಸಾಮಾಜಿಕ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರಿಗೆ ಇನ್ನಾದರು ಸರ್ಕಾರ ನ್ಯಾಯ ಒದಗಿಸಬೇಕೆಂದು ವಿನೋದ್ ವಾಲ್ಟರ್ ಪಿಂಟೊ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಸ್ಟ್ಯಾನ್ ಸ್ವಾಮಿ ಅವರ ಆರೋಪವನ್ನು ಸಾಬೀತುಪಡಿಸಲು ತನಿಖಾಧಿಕಾರಿಗಳಿಗಾಗಲಿ, ಸರ್ಕಾರಕ್ಕಾಗಲಿ ಸಾದ್ಯವಾಗಿಲ್ಲ. ತೀವ್ರ ಅನಾರೋಗ್ಯಕ್ಕೊಳಗಾದಾಗಲೂ ಅವರಿಗೆ ಜಾಮೀನು ಸಿಗಲಿಲ್ಲ. ನ್ಯಾಯದ ನಿರೀಕ್ಷೆಯಲ್ಲಿರುವಾಗಲೇ ಸಾವನಪ್ಪಿದ್ದಾರೆ ಎಂದರು. ಪ್ರಫುಲ್ ಡಿಸೋಜಾ, ವಿಲ್ಫ್ರೆಡ್ ವಿಲಿಯಂ ಪಿಂಟೊ, ಪ್ರವೀಣ್ ನೆವಿಲ್ ಮೆಂಡೋನ್ಸಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.