ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ : ಅ.2ರಂದು ಸಂರಕ್ಷಣಾ ಅಭಿಯಾನ
ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಸಂಭ್ರಮೋತ್ಸವದ ಆಚರಣೆ ಸಂರಕ್ಷಣಾ ಅಭಿಯಾನವು ಆಕ್ಟೋಬರ್ 2ರಂದು ಬೆಳಗ್ಗೆ 9 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣಗೈದು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪಾದಯಾತ್ರೆಯನ್ನು ಪ್ರಾರಂಭಿಸಲಾಗುವುದು ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಬಿ. ಸಲ್ಯಾನ್ ತಿಳಿಸಿದರು.
ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಈ ಅಮೃತ ಮಹೋತ್ಸವದ ಆಚರಣೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನಿರ್ದೇಶನದಂತೆ ವರ್ಷ ಪೂರ್ತಿ ಆಚರಿಸುವ ಅಭಿಯಾನವನ್ನು ಲಾಲ್‍ಬಾಗ್‍ನಲ್ಲಿರುವ ಮಹಾತ್ಮಾಗಾಂಧಿ ಪ್ರತಿಮೆಯ ಎದುರು ಉದ್ಘಾಟನೆಗೊಳ್ಳಲಿರುವುದು. ಈ ಆಚರಣೆಯ ಉದ್ದೇಶ ಯುವಜನರಲ್ಲಿ ಮತ್ತು ಸಾರ್ವಜನಿಕರಲ್ಲಿ ಸ್ವಾತಂತ್ರ್ಯೋತ್ಸವದ ಬಗ್ಗೆ ಅರಿವು ಮೂಡಿಸುವುದು ಜನಜಾಗೃತಿ ಸಾರ್ವಜನಿಕ ಕಾರ್ಯಕ್ರಮದೊಂದಿಗೆ ಜನರಲ್ಲಿ ದೇಶಾಭಿಮಾನದ ವಿಚಾರವನ್ನು ಬಿತ್ತುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಾಂತಲಾಗಟ್ಟಿ, ರಾಕೇಶ್ ದೇವಾಡಿಗ, ಚೇತನ್ ಕುಮಾರ್, ಯೋಗೀಶ್ ನ್ಯಾಕ್, ಸಮರ್ಥ್ ಭಟ್ ಉಪಸ್ಥಿತರಿದ್ದರು.