ಹರಿಕೃಷ್ಣ ಪುನರೂರು ಪದ್ಮಶ್ರೀ ಪ್ರಶಸ್ತಿಗೆ ಸೂಕ್ತ ಆಯ್ಕೆ: ನಿಮ್ಮೆಲ್ಲರ ಬೆಂಬಲವಿರಲಿ
ಸಮಾಜ ಸೇವೆ, ಬಾಲಕಾರ್ಮಿಕರ ಬಗ್ಗೆ ಕಾಳಜಿ ಶಿಕ್ಷಣ ಪ್ರೇಮಿ,ಕೃಷಿ,ಆರೋಗ್ಯ ಕ್ಷೇತ್ರ, ಸಾಮಾಜಿಕ,ವಿಧವಾ ವಿವಾಹ, ವಸತಿ, ಧಾರ್ಮಿಕ, ಕನ್ನಡ ನಾಡು ನುಡಿ ಸೇವೆ ಹೀಗೆ ಹತ್ತು ಹಲವು ಕ್ಷೇತ್ರ ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಪುನರೂರು . ಆಡು ಮುಟ್ಟದ ಸೊಪ್ಪಿಲ್ಲ ಪುನರೂರು ಸೇವೆ ಸಲ್ಲಿಸದ ಕ್ಷೇತ್ರ ಗಳಿಲ್ಲ.
ಕನ್ನಡ ನಾಡಿನ ಕನ್ನಡ ಮನಸ್ಸುಗಳಲ್ಲಿ ಮನೆ ಮಾಡಿರುವ ಕರಾವಳಿ ಭಾಗದ ಕನ್ನಡ ಸೇವಕ ಧರ್ಮದರ್ಶಿ ಹರಿಕೃಷ್ಣ ಪುನರೂರು ಈ ನಾಡಿನ ಕನ್ನಡ ಮನಸ್ಸುಗಳ ಮೇಲೆ ಅವರು ಮಾಡಿರುವ ಪ್ರಭಾವ ಅನನ್ಯ.ನಾಡಿನ ಸಮಸ್ತ ಹಿರಿಯ, ಕಿರಿಯ ಲೇಖಕರ ಪ್ರಸಿದ್ಧ ಬರಹಗಾರರ, ಪ್ರಾಜರ, ಪಂಡಿತರ ಒಡನಾಡಿಯಾಗಿ ಹೊಸ ಬರಹಗಾರರಿಗೆ ಬೆಳಕಾದವರು.
ಇಂತಹ ಮೇರು ವ್ಯಕ್ತಿತ್ವದ ಸಾಧಕರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡಿಸಲು ನಿಮ್ಮ ಶಿಫಾರಸು ಮತ್ತು ಬೆಂಬಲವನ್ನು http://padmaawards. gov.in ಜಾಲತಾಣಕ್ಕೆ 15.09.2021 ದಿನಾಂಕದೊಳಗೆ ಅಪ್ಲೋಡ್ ಮಾಡಲು ಕೋರಿದೆ. ಹೆಚ್ಚಿನ ವಿವರ ಬೇಕಿದ್ದರೆ ಸಂಪರ್ಕಿಸಿ, ನಾಗೇಶ ಚಡಗ 9844746851/9844966864