ಹರೇಕಳದಲ್ಲಿ DYFI ಯುವಜನರ ಗ್ರಾಮ ಸಮಾವೇಶ
ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಅದ್ಯತೆ ನೀಡಿ ಎಂಬ ಘೋಷಣೆಯಲ್ಲಿ ಹರೇಕಳ ಗ್ರಾಮದಲ್ಲಿ ಯುವಜರ ಸಮಾವೇಶ ನಡೆಯಿತು. ಸಮಾವೇಶದ ಉಧ್ಘಾಟನೆಯನ್ನು ಮಾಡಿ ಮಾತನಾಡಿದ ಮಾಜಿ DYFI ರಾಜ್ಯಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಯುವಜನತೆಯನ್ನ ಗಂಭೀರವಾಗಿ ಕಾಡುತ್ತಿರುವ ನಿರದ್ಯೋಗ ಸಮಸ್ಯೆಯ ವಿರುದ್ದ, ಉದ್ಯೋಗದ ಹಕ್ಕಿಗಾಗಿ ಯುವಕರು ಹೋರಾಟ ನಡೆಸಬೇಕು ಎಂದು ಕರೆನೀಡಿದರು.
ಸಭೆಯಲ್ಲಿ ಪ್ರಮುಖ ಭಾಷಣವನ್ನು DYFI ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾಡಿದರು, ಸಭೆಯನ್ನು ಉದ್ದೇಶಿಸಿ DYFI ಜಿಲ್ಲಾ ಉಪಾಧ್ಯಕ್ಷರಾದ ಡಾ.ಜೀವನ್ ರಾಜ್ ಕುತ್ತಾರ್, DYFI ಉಳ್ಳಾಲ ವಲಯ ಅಧ್ಯಕ್ಷರಾದ ರಪೀಕ್ ಹರೇಕಳ, DYFI ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ ಮಾತನಾಡಿದರು, ಸಭೆಯಲ್ಲಿ ಉಳ್ಳಾಲ ವಲಯ ಮುಖಂಡರಾದ ರಝಾಕ್ ಮೊಂಟೆಪದವು , ರಝಾಕ್ ಮುಡಿಪು, ಅಶ್ರಪ್ ಹರೇಕಳ ಉಪಸ್ಥಿತರಿದ್ದರು, ಸಭೆಯ ಅಧ್ಯಕ್ಷತೆಯನ್ನು ನಿಝಾಂ ಹರೇಕಳ ವಹಿಸಿದ್ದರು, ರಿಝ್ವಾನ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು, ರಾಶೀದ್ ಹರೇಕಳ ಧನ್ಯವಾದ ಗೈದರು, ಸಮಾವೇಶದಲ್ಲಿ 16 ಜನರ ನೂತನ ಹರೇಕಳ ಗ್ರಾಮ ಸಮಿತಿಯನ್ನು ರಚಿಸಲಾಯಿತು ಅಧ್ಯಕ್ಷರಾಗಿ ಬಶೀರ್ ಹರೇಕಳ ಮತ್ತು ಕಾರ್ಯದರ್ಶಿಯಾಗಿ ರಿಝ್ವಾನ್ ಹರೇಕಳರವರನ್ನು ಆಯ್ಕೆ ಮಾಡಲಾಯಿತು. ಸಮಾವೇಶದಲ್ಲಿ ಇತ್ತೀಚೆಗೆ ಡಾಕ್ಟರೆಟ್ ಪದವಿ ಪಡೆದ ಜಿಲ್ಲಾ ಮುಖಂಡರಾದ ಡಾ.ಜೀವನ್ ರಾಜ್ ಕುತ್ತಾರ್ ಹಾಗೂ DYFI ಉಳ್ಳಾಲ ವಲಯಧ್ಯಕ್ಷರಾಗಿ ಆಯ್ಕೆಯಾದ ರಫೀಕ್ ಹರೇಕಳರವರನ್ನು ಗೌರವಿಸಲಾಯಿತು.