ಹಾಪ್ ಪಿಚ್ ಶಾರ್ಟ್ ಕ್ರಿಕೆಟ್ ಟೂರ್ನಮೆಂಟ್ : ಚಿದಾನಂದ ಸವದಿ ಅವರಿಂದ ಚಾಲನೆ
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹವು ಕೂಡ ಸದೃಢವಾಗುತ್ತದೆ ಕೊವೀಡ್ ಸಂಕಷ್ಟದ ಸಮಯದಲ್ಲಿ ಕ್ರೀಡೆಗೆ ಹಿನ್ನಡೆ ಉಂಟಾದ ಪರಿಣಾಮ ಮತ್ತೊಮ್ಮೆ ಕ್ರೀಡಾ ವಿಭಾಗ ಸಹಜ ಸ್ಥಿತಿಗೆ ಮರಳಬೇಕು. ಈ ನಿಟ್ಟಿನಲ್ಲಿ ಮಾಜಿ ಡಿಸಿಎಮ್ ಹೆಸರಿನಲ್ಲಿ ಎಲ್.ಎಸ್. ಟ್ರೋಫಿ ಹಾಫ್ ಪಿಚ್ ಕ್ರಿಕೇಟ್ ಟೂರ್ನಮೆಂಟ್ ಸಹಕಾರಿಯಾಗಲಿ ಎಂದು ಬಿಜೆಪಿ ಧುರೀಣ ಚಿದಾನಂದ ಸವದಿ ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕೆಎಲ್‌ಇ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಎಲ್.ಎಸ್. ಟ್ರೋಫಿ ಹಾಪ್ ಪಿಚ್ ಶಾರ್ಟ ಕ್ರಿಕೇಟ್ ಟೂರ್ನಮೆಂಟ್ ನ ಸಮಾರೋಪ ಕಾರ್ಯಕ್ರಮದಲ್ಲಿ ಆಯೋಜಿ ಕರಾಗಿ ಮಾತನಾಡಿದ ಅವರು, ಈಗಿನ ಯುವಕರಿಗೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹವು ಕೂಡ ಸದೃಢವಾಗುವುದರ ಜೋತೆಗೆ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿಪಕ ಕಡೋಲಿ, ರಾಹುಲ ನಾಯಿಕ, ಅಕ್ಷಯ ಸವದಿ, ರಾಜು ಅನ್ಯಾಪ್ಪನ್ನವರ, ಹಣಮಂತ ರಜಪುತ, ವಿಜಯ ಕಾಂಬಳೆ, ಆಶೀಪ ತಾಂಬೋಳಿ, ಪ್ರದೀಪ ನಂದಗಾಂವ ಮೊದಲಾದವರು ಉಪಸ್ಥಿತರಿದ್ದರು.