ಹಾಸನದಲ್ಲಿ ಬೆಂಕಿ ತಗುಲಿ ಸುಟ್ಟು ಕರಕಲಾದ ಬೇಕರಿ : ಸಹಾಯ ಹಸ್ತ ಚಾಚಿದ ಜೈ ಕರ್ನಾಟಕ ಸಂಘ

ಒಂದೆಡೆ ಕೊರೊನಾ ಎಂಬ ಮಹಾಮಾರಿ ಮನುಷ್ಯನನು ಪಾತಳಕ್ಕೆ ತೊರೆಯುತ್ತಿದ್ದರೆ ಇನ್ನೊಂದು ಕಡೆ ಬೇಕರಿ ಕಾರ್ಮಿಕರ ಬದುಕು ಹೀನಾಯ ಸ್ಥಿತಿ ತಲುಪಿದೆ. ದಿನ ಬೆಳಗಾದರೆ ಬೇಕರಿ ಪದಾರ್ಥಗಳನ್ನು ಮಾರಿ ಬದುಕುವ ಬೇಕರಿ ಕಾರ್ಮಿಕರು ಇಂದು ಬೇಕರಿಗಳನ್ನು ಮುಚ್ಚಿರುವ ಕಾರಣ ಸಾಕಷ್ಟು ನಷ್ಟದಲ್ಲಿ ಸಿಲುಕಿದ್ದಾರೆ. ಹೀಗಿರುವಾಗ ಹಾಸನ ಅಯ್ಯಂಗಾರ್ ಬೇಕರಿ ಸುಟ್ಟು ಕರಕಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಬಂಟಕಲ್‍ನಲ್ಲಿ ವೆಂಕಟೇಶ್ ಎಂಬುವವರಿಗೆ ಸೇರಿದ ಹಾಸನ್ ಅಯ್ಯಂಗಾರ್ ಬೇಕರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಸರಿ ಸುಮಾರು ಹದಿನೈದು ಲಕ್ಷ ಮೌಲ್ಯದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಮುಂದಿನ ಜೀವನ ಹೇಗೆಂದು ವೆಂಕಟೇಶ್ ಚಿಂತಿಸುತ್ತಿದ್ದಾರೆ. ಹೀಗಿರುವಾಗ ಜೈಕರ್ನಾಟಕ ಬೇಕರಿ ಕಾರ್ಮಿಕರ ಸಂಘದ ಹಾಸನ ಘಟಕದಿಂದ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಇದೇ ವೇಳೆ ಮಾತನಾಡಿದ ಬೇಕರಿ ಮಾಲೀಕ ವೆಂಕಟೇಶ್ ನನ್ನದು ಸೇನೆ ಮತ್ತು ಕಾರನ್ನು ಮಾರಿ ಬಂಡವಾಳ ಹಾಕಿದ್ದೆ ಎಂದು ಹೇಳಿದರು.

ಈ ಸಂದರ್ಭ ಹಾಸನ ಜಿಲ್ಲಾ ಘಟಕದ ದಯಾನಂದ ಎಂ ಡಿ . ಚೇತನ್ ಲೋಕೇಶ್. ರವಿ ಮೋಹನ್ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.

Related Posts

Leave a Reply

Your email address will not be published.