ಹೆಜಮಾಡಿ ಗುಂಡಿ ರಸ್ತೆಯುದ್ಧಕ್ಕೂ ಮೆಸ್ಕಾಂ ಕಂಬಗಳಿಗೆ ಬಳ್ಳಿ ಅಲಂಕಾರ..!
ಅತೀ ದೊಡ್ಡ ವ್ಯಾಪ್ತಿ ಹೊಂದಿರುವ ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಶಾಶ್ವತ ಶಾಖಾಧಿಕಾರಿ ಇಲ್ಲದೆ, ವ್ಯವಸ್ಥೆಗಳು ಹಾಳಾಗುತ್ತಿದ್ದು ಇದಕ್ಕೆ ಸಾಕ್ಷಿಯೋ ಎಂಬಂತೆ ಹೆಜಮಾಡಿ ಗುಂಡಿ ರಸ್ತೆಯುದ್ಧಕ್ಕೂ ಮೆಸ್ಕಾಂ ವಿದ್ಯುತ್ ಕಂಬ ತಂತಿಗಳಿಗೆ ಬಳ್ಳಿ ಸುತ್ತಿಕೊಂಡು ಅಪಾಯದ ಸ್ಥಿತಿ ನಿರ್ಮಾಣಗೊಂಡಿದೆ.
ಪಡುಬಿದ್ರಿ ಮೆಸ್ಕಾಂ ಕಛೇರಿ ವ್ಯಾಪ್ತಿ ಬಹಳಷ್ಟು ವಿಸ್ತೀರ್ಣ ಇದ್ದು ಇಲ್ಲಿ ಸಮಸ್ಯೆ ತುಂಬಿ ತುಳುಕುತ್ತಿದೆ. ಈ ಬಗ್ಗೆ ಪ್ರತೀ ಗ್ರಾಮಸಭೆಗಳಲ್ಲೂ ಸಭೆಗೆ ಮಾಹಿತಿ ನೀಡಲು ಬರುವ ಪ್ರಭಾರ ಶಾಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಮಾತ್ರವಲ್ಲ.. ಶಾಶ್ವತ ಶಾಖಾಧಿಕಾರಿಯನ್ನು ನೀಡುವಂತೆ ಕೆಲ ಗ್ರಾಮಗಳ ಗ್ರಾಮಸಭೆಯಲ್ಲಿ ನಿರ್ಣಯ ಮಾಡಿದ್ದಾರೆ. ಆದರೂ ಈ ಬಗ್ಗೆ ಮೆಸ್ಕಾಂ ಮೇಲಾಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನಲೆಯಲ್ಲಿ ಗೆರೆ ಹಾಕಿ ಬಿಲ್ಲ್ ವಸೂಲಾತಿ ಬಿಟ್ಟರೆ.
ವಿದ್ಯುತ್ ತೊಂದರೆಗಳು ಸಹಿತ ಅಪಾಯಕಾರಿ ಸ್ಥಿತಿಯಲ್ಲಿ ಶಾಖಾಧಿಕಾರಿ ಸಹಿತ ಮೆಸ್ಕಾಂ ಕಛೇರಿಗೆ ಕರೆ ಮಾಡಿದರೂ ಸ್ವೀಕರಿಸುವ ಸೌಜನ್ಯವನ್ನೂ ತೋರಿಸುತ್ತಿಲ್ಲ ಎಂಬುದಾಗಿ ಪಲಿಮಾರು ಗ್ರಾಮಸಭೆಯಲ್ಲಿ ಮೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿರುವುದು ಇಲ್ಲಿ ಸ್ಮರಿಸಬಹುದಾಗಿದೆ. ಇದರಲ್ಲಿ ಶಾಖಾಧಿಕಾರಿದ್ದು, ಮಾತ್ರ ತಪ್ಪಲ್ಲ ಮೇಲಾಧಿಕಾರಿಗಳದ್ದೂ ಇದೆ. ಪಡುಬಿದ್ರಿ ಹಾಗೂ ಮುದರಂಗಡಿ ಎರಡೆರಡು ಕಡೆಗೆ ಕರ್ತವ್ಯಕ್ಕೆ ನೇಮಿಸಿದ್ದರಿಂದ ಈ ದುಸ್ಥಿತಿ ನಿರ್ಮಾಣಗೊಂಡಿದೆ. ಇದನ್ನು ಶಾಶ್ವತವಾಗಿ ಹೋಗಲಾಡಿಸಿ.. ಬಿಲ್ಲ್ ವಸೂಲಾತಿಗೆ ನೀಡಿದಷ್ಟು ಗಮನವನ್ನು ಗ್ರಾಹಕರ ಸೇವೆಗೂ ನೀಡಿ ಇಲ್ಲ ಸುತ್ತಲ ಎಲ್ಲಾ ಗ್ರಾಮಗಳ ಒಗ್ಗೂಡುವಿಕೆಯಿಂದ ನಡೆಯುವ ಪ್ರತಿಭಟನೆಯನ್ನು ಎದುರಿಸಲು ಸಿದ್ಧರಾಗಿ ಎಂಬ ಎಚ್ಚರಿಕೆಯ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.