ಹೆದ್ದಾರಿ ಸೂಚನಾ ಫಲಕಕ್ಕೆ ಅಳವಡಿಸಿದ ಕಟೌಟ್ ಗಳ ತೆರವು:ಹೆಜಮಾಡಿ ಟೋಲ್ ಪ್ಲಾಜಾ ಸಿಬ್ಬಂದಿಗಳ ಕಾರ್ಯಚರಣೆ
ಹೆದ್ದಾರಿ ಸೂಚನಾ ಫಲಕಗಳಿಗೆ ಅನದಿಕೃತವಾಗಿ ಕಟೌಟ್ ನಿರ್ಮಾಣ ಗುತ್ತಿಗೆ ಪಡೆದ ಮಂದಿ ಅಳವಡಿಸಿದ ಕಟೌಟ್ ಗಳ ಬಗ್ಗೆ ಹೆದ್ದಾರಿ ಸಂಚಾರಿಗಳಿಗೆ ಆಗುತ್ತಿರುವ ಸಮಸ್ಯೆಗಳ ಸವಿಸ್ತಾರವಾಗಿ ವಿ4 ನ್ಯೂಸ್ ವರದಿ ಪ್ರಕಟಿಸಿದ್ದು, ಈ ವರದಿಗೆ ಸ್ಪಂದನೆ ನೀಡಿದ ಹೆದ್ದಾರಿ ಇಲಾಖೆ ಹೆಜಮಾಡಿ ಟೋಲ್ ಪ್ಲಾಜಾ ಸಿಬ್ಬಂದಿಗಳ ಮೂಲಕ ಕಟೌಟ್ ತೆರವು ಕಾರ್ಯ ನಡೆದಿದೆ.
ಕಟೌಟ್ ಅಳವಡಿಸಲು ಯಾವುದೇ ಸಂಸ್ಥೆಗಳು ಗುತ್ತಿಗೆ ನೀಡಿದ್ದಲ್ಲಿ ಕಂಬ ಅಳವಡಿಸುವ ಕಷ್ಟ ತಪ್ಪಿಸಲು ಹೆದ್ದಾರಿ ಪಕ್ಕದ ಹೆದ್ದಾರಿ ಬಗೆಗಿನ ಸೂಚನಾ ಫಲಕಗಳಿಗೆ ಅಳವಡಿಸುವ ಮೂಲಕ ಕಾನೂನು ಮೀರಿ ವ್ಯವಹರಿಸುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಬಾರೀ ಟೀಕೆಗಳು ಕೇಳಿ ಬಂದಿದ್ದು, ಈ ಬಗ್ಗೆ ವಿ 4 ನ್ಯೂಸ್ ವರದಿ ಪ್ರಕಟಿಸಿ ಕೆಲವೇ ಗಂಟೆಗಳಲ್ಲಿ ಕಟೌಟ್ ಗಳ ತೆರವು ಕಾರ್ಯ ನಡೆಸುವ ಮೂಲಕ ವರದಿ ಪ್ರಕಟಿಸಿದ ವಿ4 ಗೆ ಬಾರೀ ಪ್ರಶಂಸೆ ವ್ಯಕ್ತ ವಾಗಿದೆ.