ಕಲ್ಲಾಜೆಯಲ್ಲಿ ತಬ್ಬಲಿ ಸಹೋದರರ ಮನೆಗೆ ವಿದ್ಯುತ್ ಸಂಪರ್ಕ

ಕಡಬ: ಐತ್ತೂರು ಗ್ರಾಮದ ಕಲ್ಲಾಜೆ ಎಂಬಲ್ಲಿರುವ ತಬ್ಬಲಿ ಸಹೋದರರು ಇರುವ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಅವರ ಮನೆ ಬೆಳಕು ನೀಡುವ ಮೂಲಕ ಕಡಬ ವಿಶ್ವ ಹಿಂದೂ ಪರಿಷತ್ ಸಂಘಟನೆ ಮಾನವೀಯತೆ ಮೆರೆದಿದೆ.

ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ದಿ.ಗೋಪಾಲ ಗೌಡ, ದಿ. ಹೇಮಾವತಿ ದಂಪತಿಯ ಪುತ್ರರಾದ ಹಿತೇಶ್ ಹಾಗೂ ತೀರ್ಥಪ್ರಸಾದ್ ಅವರು ಕಳೆದ16 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದರೆ. ಕಳೆದ 2 ವರ್ಷದ ಹಿಂದೆ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದರು. ತೀರ್ಥಪ್ರಸಾದ್ ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸಿದ್ದು ಅಂತೆಯೇ ಸಹೋದರ ಹಿತೇಶ್ 10ನೇ ತರಗತಿ ಮುಗಿಸಿ ಇಬ್ಬರು ಇದೀಗ ಅಡಿಕೆ ಸುಳಿಯುವ ಕೆಲಸ ಸೇರಿದಂತೆ ಕೂಲಿ ಕೆಲಸಕ್ಕೆ ಹೋಗಿ ಜೀವನ ನಿರ್ವಹಿಸುತ್ತಿದ್ದಾರೆ.

ತೀರ ಬಡವರಾಗಿರುವುದು ಅಲ್ಲದೆ, ದಾಖಲೆ ಪತ್ರಗಳ ಸಮಸ್ಯೆಯಿಂದ ಇವರ ಮನೆಗೆ ಇದುವರೆಗೆ ವಿದ್ಯುತ್ ಸಂಪರ್ಕವೇ ಆಗಿರದೆ ಕತ್ತಲೆಯಲ್ಲೆ ಈ ಸಹೋದರರ ಜೀವನ ಸಾಗಿತ್ತು. ಇದನ್ನು ಮನಗಂಡ ಕಡಬ ಪ್ರಖಂಡ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಸಂಘಟನೆಯ ನೇತೃತ್ವದಲ್ಲಿ ಉಚಿತವಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಲಾಗಿದೆ. ಕಂಬ ಹಾಗೂ ತಂತಿಗಳನ್ನು ಮೆಸ್ಕಾಂ ವತಿಯಿಂದ ಅಳವಡಿಸಲಾಗಿದ್ದರೆ, ವಯರಿಂಗ್ ಸೇರಿದಂತೆ ಇತರ ಎಲ್ಲ ವ್ಯವಸ್ಥೆಯನ್ನು ವಿ.ಹಿಂ.ಪ. ಉಪಾಧ್ಯಕ್ಷ ಸಂತೋಷ್ ಸುವರ್ಣ ಕೋಡಿಬೈಲ್ ಅವರು ಸಂಘದ ಪರವಾಗಿ ಉಚಿತವಾಗಿ ಮಾಡಿಕೊಟ್ಟಿದ್ದಾರೆ.

ಸಹೋದರರ ಮನೆಗೆ ಭೇಟಿ ನೀಡಿದ ವಿ.ಹಿಂ.ಪ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯರವರು ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ವಿಹಿಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಕೋಡಿಬೈಲು, ಸುರೇಶ್ ಕೋಟೆಗುಡ್ಡೆ, ಗೋರಕ್ಷಾ ಪ್ರಮುಖ್ ಉಮೇಶ್ ಶೆಟ್ಟಿ ಸಾಯಿರಾಂ, ಬಜರಂಗದಳ ಕಡಬ ಪ್ರಖಂಡ ಸಂಯೋಜಕ ಮೂಲಚಂದ್ರ ಕಾಂಚನ, ಬಜರಂಗದಳ ಸುರಕ್ಷಾ ಪ್ರಮುಖ್ ಜಯಂತ ಕಲ್ಲುಗುಡ್ದೆ, ಸೇವಾಭಾರತಿ ಪ್ರಮುಖ್ ಅಜಿತ್ ರೈ ಅರ್ತಿಲ, ವಿಹಿಂಪ ಐತ್ತೂರು ಘಟಕದ ಅಧ್ಯಕ್ಷ ನವೀನ್ ಕಲ್ಲಾಜೆ, ಉಪಾಧ್ಯಕ್ಷ ಶೇಷಪ್ಪ ಗೌಡ ಐತ್ತೂರು, ಕೋಶಾಧಿಕಾರಿ ಜನಾರ್ಧನ ಗೌಡ ಮಲ್ಲಪ್ಪಡ್ಕ, ಗೋಪಾಲ ಗೌಡ ಹೊಸಕ್ಲು, ರುಕ್ಮಯ್ಯ ಗೌಡ ಕರಿಯಪ್ಪ ಗೌಡ, ಉಮೇಶ್ ಕಲ್ಲಾಜೆ, ಭವಾನಿಶಂಕರ್ ಕಲ್ಲಾಜೆ ಚೇತನ್ ಅಂತಿಬೆಟ್ಟು, ರಂಜಿತ್ ರೈ ಬೆದ್ರಾಜೆ ಮೊದಲಾದವರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.