ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಬಂಟ್ವಾಳ: ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಬ್ರಹ್ಮರಕೂಟ್ಲು ಹಾಗೂ ಕಳ್ಳಿಗೆ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಬುಧವಾರ ಶಾಲೆಯಲ್ಲಿ ನಡೆಯಿತು.

ಮಾಜಿ ಸಚಿವ, ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿ ಸಾಂಕೇತಿಕವಾಗಿ ಪುಸ್ತಕ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು ಶಿಕ್ಷಣ ಪ್ರಗತಿಯ ಸಂಕೇತ ಆದರೆ ಹಿಂದೆಲ್ಲಾ ಎಲ್ಲರಿಗೂ ಶಿಕ್ಷಣ ಪಡೆಯುವ ಅವಕಾಶ ಇರಲಿಲ್ಲ. ಹೆಣ್ಣು ಮಕ್ಕಳನ್ನು ಶಾಲೆಗೆ ಯಾಕೆ ಕಳುಹಿಸಬೇಕು ಎನ್ನುವ ಕಾಲಘಟ್ಟವೂ ಇತ್ತು. ಸಾಮಾಜಿಕ ಬದಲಾವಣೆಯಿಂದಾಗಿ ಇಂದು ಪ್ರತಿಯೊಬ್ಬರಿಗೂ ವಿದ್ಯಾಭ್ಯಾಸ ಪಡೆಯುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು. ಮೂಲಭೂತವಾದವನ್ನು ಯಾವತ್ತೂ ಬೆಂಬಲಿಸಬಾರದು, ಪ್ರಗತಿಪರ ಚಿಂತನೆ ನಮ್ಮದಾಗಬೇಕು ಎಂದು ತಿಳಿಸಿದರು.


ಶಾಲಾ ದತ್ತು ಸ್ವೀಕಾರ ಸಮಿತಿ ಸಂಚಾಲಕ, ಜಿ.ಪಂ. ಮಾಜಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ಮಾತನಾಡಿ ಆದಷ್ಟು ಬೇಗ ಶಾಲೆ ಆರಂಭವಾಗಲಿ ಎಂದು ಆಶಿಸಿದರು. ವಿದ್ಯಾರ್ಥಿಗಳ ಬೌದ್ದಿಕ ಹಾಗೂ ದೈಹಿಕ ಬೆಳವಣಿಗೆ ಶಾಲೆಗಳು ಸಹಕಾರಿ, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಶಾಲೆ ಆರಂಭದ ಹಂತದಲ್ಲಿಯೇ ಶಾಲೆಗೆ ಕಳುಹಿಸುವ ಜವಾಬ್ದಾರಿ ಪೋಷಕರಿಗಿದೆ ಎಂದರು.
baಕಳ್ಳಿಗೆ ಗ್ರಾಮಾಭಿವ್ರದ್ದಿ ಸಂಘದ ಅಧ್ಯಕ್ಷ ದಿವಾಕರ ಪಂಬದ ಬೆಟ್ಟು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ದತ್ತು ಸಮಿತಿ ಸದಸ್ಯ ಮಧುಸೂದನ್ ಶೆಣೈ, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೋಷನ್ ರೈ, ಗ್ರಾ.ಪಂ.ಸದಸ್ಯ ರವಿರಾಜ್ ಜೈನ್, ಮನೋಜ್ ಕನಪಾಡಿ, ಹಳೆ ವಿದ್ಯಾರ್ಥಿ ಶಶಿಧರ ಬ್ರಹ್ಮರಕೂಟ್ಲು, ವೆಂಕಪ್ಪ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀಕಲಾ, ಹಿರಿಯರಾದ ನೋಣಯ್ಯ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಪ್ಲೋರಿನ್ ರೆಬೆಲ್ಲೊ ಸ್ವಾಗತಿಸಿದರು, ಪ್ರೀತಿ ಪ್ಲೇವಿ ಫೆರ್ನಾಂಡೀಸ್ ವಂದಿಸಿದರು. ಮಂಜುಳಾ ಡಿ. ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.