ಬನ್ನೂರಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಪುತ್ತೂರು: ಒಬ್ಬ ವ್ಯಕ್ತಿ ಹುಟ್ಡುವುದಕ್ಕೂ ಮೊದಲು ಮತ್ತು ಸತ್ತ ನಂತರವು ಕಾನೂನು ಆತನ ಜೊತೆ ಇರುತ್ತದೆ. ಅಂದರೆ ಕಾನೂನು ಗರ್ಭದಿಂದ ಗೋರಿಯ ತನಕ ಇರುತ್ತದೆ ಎಂದಯ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ರಮೇಶ್ ಎಮ್ ಅವರು ಹೇಳಿದರು.

ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪುತ್ತೂರು ರಾಜ್ಯ ಅಬಕಾರಿ ಇಲಾಖೆ ಪುತ್ತೂರು ಮತ್ತು ನವೋಯದ ಯುವಕ ಮತ್ತು ಮಹಿಳಾ ವೃಂದದ ಅಶ್ರಯದಲ್ಲಿ ಅ.10ರಂದು ಬನ್ನೂರು ನವೋಯದ ಯುವಕ ವೃಂದ ವಠಾರದಲ್ಲಿ ನಡೆದ ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೆ ಸಂದರ್ಭದಲ್ಲಿ ಸಂಘದ ಸದಸ್ಯರಾಗಿದ್ದು ಅಬಕಾರಿ ಇಲಾಖೆಯ ಉಪನಿರೀಕ್ಷಕ ಅಂಗಾರ ಪಿ ಮತ್ತು ಸಿಬ್ಬಂದಿ ಪ್ರೇಮಾನಂದ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ ರಾಜೇಶ್ವರಿ, ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ,ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು, ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಯುವಕ ಮಂಡಲದ ಗೌರವಾಧ್ಯಕ್ಷರಾಗಿರುವ ಅಬಕಾರಿ ಇಲಾಖೆ ಎಸ್.ಐ ಅಂಗಾರ ಪಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಹೆಚ್,ನಗರಸಭಾ ಸದಸ್ಯೆ ಮೋಹಿನಿ ವಿಶ್ವನಾಥ ಗೌಡ, ಸರಕಾರಿ ಸಹಾಯಕ ಅಭಿಯೋಜಕಿ ಕವಿತಾ, ಮಹಿಳಾ ಮಂಡಲದ ಅಧ್ಯಕ್ಷೆ ಭಾರತಿ ಆನಂದ್,ನವೋಯದ ಯುವಕ ಮಂಡಲದ ಅಧ್ಯಕ್ಷ ಉಮೇಶ್ ಆನೆಮಜಲು, ನಗರಸಭೆ ಸದಸ್ಯೆಯಾದ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಪ್ರೇಮಲತಾ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.