ರಾಜ್ಯದ ಗುಪ್ತಚರ, ಗೃಹ ಇಲಾಖೆಯ ವೈಫಲ್ಯಕ್ಕೆ ಕೈಗನ್ನಡಿ : ಮಂಗಳೂರಲ್ಲಿ ಕೆಪಿಸಿಸಿ ವಕ್ತಾರ ಎ.ಸಿ.ವಿನಯ್ ರಾಜ್ ಆರೋಪ

ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟಪ್ರಕರಣ ಇದೊಂದು ರಾಜ್ಯದ ಗುಪ್ತಚರ ವಿಭಾಗ ಮತ್ತು ಗೃಹ ಇಲಾಖೆಯ ವೈಫಲ್ಯ ಎತ್ತಿತೋರಿಸುತ್ತಿದೆ ಅಂತಾ ಕೆಪಿಸಿಸಿ ವಕ್ತಾರ ಎ.ಸಿ.ವಿನಯ್ ರಾಜ್ ಆರೋಪಿಸಿದ್ರು.

ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಈ ಘಟನೆಯ ಹಿಂದೆಇರುವ ಎಲ್ಲಾ ದೇಶ ದ್ರೋಹಿಗಳನ್ನು ಕೂಡಲೇ ಬಂಧಿಸಿ ಅವರನ್ನು ಯು.ಎ.ಪಿ.ಎ ಕಾಯಿದೆಯಅಡಿಯಲ್ಲಿ ಜೈಲಿಗೆ ಅಟ್ಟುವಂತಹ ಪ್ರಾಮಾಣಿಕ ಪ್ರಯತ್ನವನ್ನು ತನಿಖಾ ಇಲಾಖೆ ಮಾಡಬೇಕೆಂದುಆಗ್ರಹಿಸುತ್ತೇವೆ. ಮಂಗಳೂರು ವಿಧ್ಯಾಕಾಶಿ ಎಂದು ದೇಶದಲ್ಲಿ ಹೆಸರು ಪಡೆದಿದೆ. ಲಕ್ಷಾಂತರ ಮಕ್ಕಳುದೇಶ ವಿದೇಶದಿಂದ ವಿಧ್ಯಾರ್ಜನೆಗಾಗಿ ಪ್ರತಿ ವರ್ಷ ಮಂಗಳೂರಿಗೆ ಬರುತ್ತಿದ್ದಾರೆ. ಮಾತ್ರವಲ್ಲದೆ ದ.ಕ
ಜಲ್ಲೆ ಟೆಂಪಲ್ ಟೂರಿಸಂಗೆ ಹೆಸರುವಾಸಿಯಾಗಿದೆ. ಕರ್ನಾಟಕ ರಾಜ್ಯದ ಎರಡನೆಯ ಆರ್ಥಿಕಚಟುವಟಿಕೆ ಕೇಂದ್ರವಾಗಿದೆ. ಇದಕ್ಕೆ ಧಕ್ಕೆ ತರುವಂತಹ ನಿಟ್ಟಿನಲ್ಲಿ ದುಷ್ಟ ಶಕ್ತಿಗಳು ಕಾರ್ಯನಿರತವಾಗಿದೆ.ಎಂದು ಈ ಪ್ರಕರಣದಿಂದ ಸಾಬೀತಾಗಿರುತ್ತದೆ. ಈ ಪ್ರಕರಣದ ಪ್ರಧಾನ ಆರೋಪಿ ತೀರ್ಥಹಳ್ಳಿಯ ಸೊಪ್ಪಿನಗುಡ್ಡೆ ನಿವಾಸಿ ಮೊಹಮ್ಮದ್ ಶಾರಿಕ್ ಬಗ್ಗೆ ಗೃಹ ಇಲಾಖೆ ನಿರ್ಲಕ್ಷ ವಹಿಸಿದ್ದೇ ಪ್ರಮುಖ ಕಾರಣವಾಗಿರುತ್ತದೆ.

ಈತನನ್ನು ಬಂಧಿಸಲು ಯಾವ ರೀತಿಯ ಕ್ರಮ ವಹಿಸಿದ್ದಾರೆ ಎಂಬ ಬಗ್ಗೆ ಗೃಹಇಲಾಖೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾಗಿದೆ. ಈತನ ಚಟುವಟಿಕೆಯ ಮೇಲೆ ನಿರಂತರವಾಗಿನಿಗಾ ಇಡುವಂತಹ ಮಹತ್ತರವಾದ ಜವಾಬ್ದಾರಿ ರಾಜ್ಯ ಗೃಹ ಇಲಾಖೆಗೆ ಇದ್ದರೂ ಸಹ ಅದರ ಬಗ್ಗೆ
ನಿರ್ಲಕ್ಷವಹಿಸಿದ ಕಾರಣ ಮಗದೊಮ್ಮೆ ಈತ ಮಂಗಳೂರಿನಲ್ಲಿ ಆತಂಕ ಸೃಷ್ಟಿಸುವಂತಹ ಈ ಪ್ರಕರಣಮಾಡುವಂತಹ ಸನ್ನಿವೇಶ ಉಧ್ಭವವಾಗಿದೆ ಎಂದು ಅವರು ದೂರಿದರು.ಈ ಪ್ರಕರಣದ ಬಗ್ಗೆ ಗೃಹ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾಪೆÇೀಲೀಸರಿಗೆ ಪ್ರಶಂಶಾ ಹೇಳಿಕೆಯನ್ನು ಕೊಟ್ಟಿರುವುದು ಗೃಹ ಇಲಾಖೆಯ ವೈಫಲ್ಯವನ್ನು ಮರೆಮಾಚುವ ಹುನ್ನಾರವಾಗಿದೆ ಎಂದು ಅವರು ಹೇಳಿದರು. ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅನಿಲ್ ಕುಮಾರ್,ರಾಕೇಶ್ ದೇವಾಡಿಗ, ಅಪ್ಪಿ,ಶಾಂತಲಾ ಗಟ್ಟಿ, ಮಂಜುಳ ನಾಯಕ್, ನಿರಾಜ್ ಪಾಲ್, ನಝೀರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.