ಮೂಡುಬಿದಿರೆಯಲ್ಲಿ ಮಹಿಳೆಯ ಸರ ಎಗರಿಸಿ ಪರಾರಿ
ಮೂಡುಬಿದಿರೆ: ಪರಿಚಯಸ್ಥನಂತೆ ನಟಿಸಿ ಮಹಿಳೆಯ ಜತೆ ಮಾತನಾಡಿ ಆಕೆಯ ಮೂರೂವರೆ ಪವನಿನ ಸರವನ್ನು ವ್ಯಕ್ತಿಯೊಬ್ಬ ಎಗರಿಸಿ ಪರಾರಿಯಾದ ಘಟನೆ ಸೋಮವಾರ ಮಧ್ಯಾಹ್ನದ ವೇಳೆ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಅಶ್ವತ್ಥಪುರದಲ್ಲಿರುವ ತನ್ನ ಮಗಳ ಮನೆಗೆ ಹೋಗಲು ನಾರಾವಿಯಿಂದ ಬಂದಿದ್ದ ಮಧ್ಯ ವಯಸ್ಸಿನ ಮಹಿಳೆಯು ಬಸ್ಸಿನಿಂದ ಇಳಿದು ಬರುತ್ತಿದ್ದಾಗ ಚಿಕ್ಕಮ್ಮನೆಂದು ಕರೆದು ಪರಿಚಯಿಸಿಕೊಂಡಿದ್ದ ಅಲ್ಲದೆ ಮಹಿಳೆಯ ಮನೆಯವರ ಪರಿಚಯವನ್ನೆಲ್ಲಾ ಹೇಳಿದ ಅಲ್ಲದೆ ಆಕೆಯನ್ನು ಹೊಟೇಲ್ ಗೆ ಕರೆದುಕೊಂಡು ಹೋಗಿ ಚಾವನ್ನು ಕುಡಿಸಿದ್ದ.
ನಂತರ ಹೊರಗಡೆ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ವೀಕ್ಷಿಸಿ, ಅದೇ ಡಿಸೈನ್ ಮಾದರಿಯ ಸರ ತನ್ನ ಮಗಳಿಗೂ ಖರೀದಿಸಲಿದೆ ಇದನ್ನು ತೋರಿಸಿ ಬರುವುದಾಗಿ ಹೇಳಿದಾಗ ಆಕೆ ಕುತ್ತಿಗೆಯಿಂದ ಸರವನ್ನು ತೆಗೆದುಕೊಟ್ಟಿದ್ದಾರೆ. ಅಲ್ಲದೆ ಹಣ್ಣು ಹಂಪಲು ತರುವುದಾಗಿ ಆಕೆಯಿಂದಲೇ ರೂ 1000ವನ್ನು ತೆಗೆದುಕೊಂಡು ಹೋಗಿದ್ದಾನೆ. ತರುವುದಾಗಿ ಹೇಳಿ ಮಹಿಳೆಯಿಂದ ಸರ ಪಡೆದುಕೊಂಡಿದ್ದ. ಸರವನ್ನು ತೆಗೆದುಕೊಂಡು ಮರಳಿ ಬಾರದ್ದನ್ನು ಗಮನಿಸಿದ ಅವರು ಪಕ್ಕದ ಅಂಗಡಿಯಲ್ಲಿ ಕುಳಿತಿದ್ದವರಲ್ಲಿ ಮೊಬೈಲ್ ನೀಡಿ ತನ್ನ ಮಗಳಿಗೆ ಕಾಲ್ ಮಾಡುವಂತೆ ತಿಳಿಸಿದ್ದಾರೆ. ನಂತರ ಯಾಕೆ ಎಂದು ವಿಚಾರಿಸಿದಾಗ ಸರ ಕಳೆದುಕೊಂಡ ವಿಷಯ ಬೆಳಕಿಗೆ ಬಂದಿದೆ.
ಪೋಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.