ಆಧಾರ್ ತಿದ್ದುಪಡಿ ಮತ್ತು ನೋಂದಣಿಯನ್ನು ಗ್ರಾಮೀಣ ಭಾಗದ ಜನತೆಯ ಬಳಿ ತಲುಪಿಸುವ ಯುವ ಸಂಘಟನೆಗಳ ಸೇವೆ ಶ್ಲಾಘನೀಯ – ರೊ. ಗಣೇಶ್ ಎಂ
ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಗ್ರಾಮ ಪಂಚಾಯತ್ ಪಡುಪಣಂಬೂರು ಜಂಟಿ ಆಶ್ರಯದಲ್ಲಿ ಆಧಾರ್ ಸೇವಾ ಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ, ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ10ನೇ ತೋಕೂರು, ಹಳೆಯಂಗಡಿ ಪ್ರಾಯೋಜಕತ್ವದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 17.10.2024ನೇ ಗುರುವಾರ ಫೇಮಸ್ ಯೂತ್ ಕ್ಲಬ್ಬಿನ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರುರವರು ವಹಿಸಿ ಇಂದಿನ ಬದುಕಿನಲ್ಲಿಆಧಾರ್ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ ಆದ್ದರಿಂದ ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕಾಗಿ ತಿಳಿಸಿದರು
ರೋಟರಿ ಕ್ಲಬ್ ಬೈಕಂಪಾಡಿ ವಲಯ ಸೇನಾನಿ ರೊ. ಗಣೇಶ ಎಂ. ರವರು ಮಾತನಾಡಿ ಆಧಾರ್ ತಿದ್ದುಪಡಿ ಮತ್ತು ನೋಂದಣಿಯನ್ನು ಗ್ರಾಮೀಣ ಭಾಗದ ಜನತೆಯ ಬಳಿ ತಲುಪಿಸುವ ಯುವ ಸಂಘಟನೆಗಳ ಸೇವೆ ಶ್ಲಾಘನೀಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷರಾದ ಹರೀಶ್ ಬಿ ಶೆಟ್ಟಿ, ಫೇಮಸ್ ಯೂತ್ ಕ್ಲಬ್ಬಿನ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್, ಆಧಾರ್ ಸೇವಾ ಕೇಂದ್ರ ಮಂಗಳೂರು ಇಲ್ಲಿನ ರಂಜನಿ, ಅನ್ವಿತಾ ಮತ್ತು ಪ್ರವೀಣ್ ರವರು ಉಪಸ್ಥಿತರಿದ್ದರು.
ಫೇಮಸ್ ಯೂತ್ ಕ್ಲಬ್ಬಿನ ಸಾಮಾಜಿಕ ಕಳಕಳಿಯನ್ನು ಗುರುತಿಸಿ ರೋಟರಿ ಕ್ಲಬ್ ಬೈಕಂಪಾಡಿ ವತಿಯಿಂದ ಸಂಸ್ಥೆಗೆ ನೂತನ ಇನ್ವರ್ಟರನ್ನು ರೋಟರಿ ಕ್ಲಬ್ ಬೈಕಂಪಾಡಿಯ ಅಧ್ಯಕ್ಷರಾದ ರೊ. ಹರೀಶ್ ಬಿ ಶೆಟ್ಟಿಯವರು ಹಸ್ತಾಂತರಿಸಿದರು.
ಕಾರ್ಯಕ್ರಮವನ್ನು ಫೇಮಸ್ ಯೂತ್ ಕ್ಲಬ್ಬಿನ ಕಾರ್ಯದರ್ಶಿ ಹಿಮಕರ್ ಕೋಟ್ಯಾನ್ ರವರು ಸ್ವಾಗತಿಸಿ, ಮಹಮ್ಮದ್ ಶರೀಫ್ ರವರು ನಿರೂಪಿಸಿದರು