ಮಂಗಳೂರು : ಜ.19ರಂದು ಅಭಿಮಾನ್ ಸ್ನೇಹ ಸಮ್ಮಿಲನ-2025 ಕಾರ್ಯಕ್ರಮ
2001ರಿಂದ 2022ರವರೆಗೆ ಮಂಗಳೂರಿನಲ್ಲಿದ್ದ ಉದ್ಯೋಗಿಗಳಿಗಾಗಿ ಅಭಿಮಾನ್ ಸ್ನೇಹ ಸಮ್ಮಿಲನ-2025 ಎಂಬ ಸ್ನೇಹ ಸಮಾಗಮ ಕಾರ್ಯಕ್ರಮವು ನಗರದ ಜ್ಯೋತಿ ವೃತ್ತದ ಬಳಿಯ ಹೊಟೇಲ್ ಕ್ವಾಲಿಟಿಯ ಎಸಿ ಸಭಾಂಗಣದಲ್ಲಿ ಜ.19ರಂದು ನಡೆಯಲಿದೆ.
ಜ.19ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿಮಾನ್ ಸ್ನೇಹ ಸಮ್ಮಿಲನ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ್ ಕಾಮತ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ಕದ್ರಿಯ ಸ್ಟೆಲ್ಲಾ ಡಿ’ಸೋಜಾ, ಮಂಜೇಶ್ವರದ ಮನೋಹರ ಶೆಟ್ಟಿ, ಅಭಿಮಾನ್ ಸ್ನೇಹ ಸಮ್ಮಿಲನ ಸಮಿತಿಯ ಕಾರ್ಯದರ್ಶಿ ಶೇಖರ್ ಆಳ್ವ ಭಾಗವಹಿಲಿದ್ದಾರೆ.
ವೇದಿಕೆಯಲ್ಲಿ ಹಲವು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.