ಮಾ.18,19 ರಂದು ಎಸಿಸಿಎಲ್- ಆಲ್ ಕಾಲೇಜು ಕ್ರಿಕೆಟ್ ಲೀಗ್-2023

ಫ್ರೆಂಡ್ಸ್ ಕುಡ್ಲ ಜೈತುಳುನಾಡು ವತಿಯಿಂದ ಎಸಿಸಿಎಲ್- ಆಲ್ ಕಾಲೇಜು ಕ್ರಿಕೇಟ್ ಲೀಗ್- 2023 ಮಾರ್ಚ್ 18 ಮತ್ತು 19ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ. ಎಸಿಸಿಎಲ್-ಆಲ್ ಕಾಲೇಜು ಕ್ರಿಕೆಟ್ ಲೀಗ್‌ನಲ್ಲಿ ಒಟ್ಟು 10 ತಂಡಗಳು ಸೆಣೆಸಾಡಲಿದೆ.

ರಾಯಲ್ ಚಾಲೆಂಜರ್ಸ್ ಪಡುಬಿದ್ರೆ, ಟೀಮ್ ಅರ್ಪಣಾ, ಟೀಮ್ ವಿನಾಯಕ, ಹೋಝ್ ಮಂಗಳೂರು, ಟೀಮ್ ಯುನೈಟೆಡ್ ಮಂಗಳೂರು, ಟೀಮ್ ಯುವ ಕುಡ್ಲ, ಆರ್‌ಸಿಪಿ ನಿಟ್ಟೆ, ಕೋಸ್ಟಲ್ ಸ್ರ್ಟೈಕರ್ಸ್, ಜಿಎಫ್‌ಜಿಸಿ ಕಾರ್‌ಸ್ಟ್ರೀಟ್, ಟೀಮ್ ತಾಂಡವ, ಕೋಸ್ಟಲ್ ಸ್ಟ್ರೈಕರ್ಸ್,ತಂಡಗಳ ನಡುವೆ ಲೀಗ್ ಪಂದ್ಯಾಟ ನಡೆಯಲಿದೆ

ಈ ಪಂದ್ಯಾಟಕ್ಕೆ ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷರಾದ ಉದಯ ಪೂಜಾರಿ ಬಳ್ಳಾಲ್‌ಬಾಗ್, ಬಿಗ್‌ಬಾಸ್ ೯ನೇ ಆವೃತ್ತಿಯ ರನ್ನರ್ ಅಪ್ ವಿಜೇತ ರಾಕೇಶ್ ಅಡಿಗರನ್ನು ಆಮಂತ್ರಿಸಲಾಯಿತು. ಇದೇ ವೇಳೆ ಕ್ರಿಕೆಟ್ ಪಂದ್ಯಾಟಕ್ಕೆ ಶುಭ ಹಾರೈಸಿದ್ದಾರೆ.
ಇನ್ನು ಪಂದ್ಯಾಟಕ್ಕೆ ರಾಜ್ ಸೌಂಡ್ಸ್ & ಲೈಟ್ಸ್ ಸಿನಿಮಾದ ನಟ ವಿನೀತ್ ಕುಮಾರ್ ಹಾಗೂ ಹಾಸ್ಯ ಕಲಾವಿದ ರವಿ ರಾಮಕುಂಜ, ಹಾಗೆಯೇ ನಟ ಅವಿನಾಶ ಶೆಟ್ಟಿ ಹಾಗೂ ಕಾಮಿಡಿ ಗ್ಯಾಂಗ್ಸ್‌ನ ಮನೀಶ್ ಶೆಟ್ಟಿ, ರವೀಂದ್ರ ನಿಕಮ್ ಮಹಾಲಕ್ಷ್ಮೀ ಜ್ಯುವೆಲ್ಲರಿ ಮತ್ತು ಕೇಸರಿಮಿಲಿಟರಿ ಹೋಟೆಲ್ ಮಾಲಕರು, ಉದ್ಯಮಿ ಲತೀಶ್ ಪೂಜಾರಿ ಬಳ್ಲಾಲ್‌ಬಾಗ್, ಆಟೋಮ್ ಜಿಮ್ ಮಾಲಕ ಮೋಹಿತ್ ಮಲ್ಲಿ, ಕದ್ರಿ ಕ್ರಿಕೆಟರ್‍ಸ್ ತಂಡದವರು, ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ ಮಂಗಳೂರು ಅವರು ಆಲ್ ಕಾಲೇಜು ಕ್ರಿಕೇಟ್ ಲೀಗ್-೨೦೨೩ಕ್ಕೆ ಶುಭ ಹಾರೈಸಿದರು. ಇನ್ನು ಈ ಕ್ರಿಕೆಟ್ ಪಂದ್ಯಾಟವು ವಿ೪ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.