ನ.13ರಂದು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ಶಿಬಿರ

ಆದರ್ಶ ಚಾರಿಟೇಬಲ್ ಟ್ರಸ್ಟ್ (ರಿ.), ಆದರ್ಶ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಮತ್ತು ಆದರ್ಶ ಆಸ್ಪತ್ರೆ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ `ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ನವೆಂಬರ್ 13ರಂದು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಜರುಗಲಿದೆ.
ಭಾನುವಾರದಂದು ಬೆಳಿಗ್ಗೆ 08:00 ರಿಂದ ಮಧ್ಯಾಹ್ನ 02:00ರ ವರೆಗೆ, ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಜರುಗಲಿದೆ. ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸುವವರು ಮೂತ್ರಪಿಂಡ ಖಾಯಿಲೆಗಳ ತಪಾಸಣೆ, ನರರೋಗ ತಪಾಸಣೆ, ಹೃದಯ ರೋಗದ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ರಕ್ತದ ಸಕ್ಕರೆ ಅಂಶ, ರಕ್ತದ ಕೊಬ್ಬಿನಾಂಶ ಹಾಗೂ ಇ.ಸಿ.ಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ವೈದ್ಯರ ಪರೀಕ್ಷೆಯ ಸಮಯದಲ್ಲಿ ಅಗತ್ಯವಿದ್ದರೆ ರೋಗಿಗಳಿಗೆ ಹೃದಯದ ಸ್ಕ್ಯಾನಿಂಗ್ (ಇಕೋ) ಹಾಗೂ ಟಿ.ಎಂ.ಟಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಇನ್ನು ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆಯ ಅಗತ್ಯವಿದ್ದಲ್ಲಿ ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು. ಇದರೊಂದಿಗೆ ಡಯಾಬಿಟಿಸ್ ಕಾಯಿಲೆ ಬಗ್ಗೆ ಮಾಹಿತಿ ನೀಡುವ ವಿವಿಧ ಪ್ರಾತ್ಯಕ್ಷಿಕೆಗಳ ಪ್ರದರ್ಶನ ಕಾರ್ಯಕ್ರಮವೂ ನಡೆಯಲಿದೆ. ರಕ್ತದ ಕೊಬ್ಬಿನಾಂಶ ಪರೀಕ್ಷೆ ಮಾಡಲಿಚ್ಚಿಸುವವರು ಖಾಲಿ ಹೊಟ್ಟೆಯಲ್ಲಿ ಬರಬೇಕು ಮತ್ತು ವೈದ್ಯಕೀಯ ಶಿಬಿರಕ್ಕೆ ಬರುವ ಎಲ್ಲಾ ಶಿಬಿರಾರ್ಥಿಗಳು ತಮ್ಮ ಹಳೆಯ ಚಿಕಿತ್ಸಾ ಚೀಟಿಯನ್ನು ತಪ್ಪದೆ ತರಬೇಕಾಗಿ ವಿಶೇಷ ಸೂಚನೆಯನ್ನು ನೀಡಲಾಗಿದೆ. ಈ ಶಿಬಿರದಲ್ಲಿ ಆದರ್ಶ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ| ಜಿ. ಎಸ್. ಚಂದ್ರಶೇಖರ್, ಡಾ| ಉದಯ ಕುಮಾರ ಪ್ರಭು, ಡಾ| ಸುದೀಪ್ ಶಟ್ಟಿ, ಡಾ| ಶ್ರೀಕಾಂತ ಕೃಷ್ಣ, ಡಾ| ವಿಶು ಕುಮಾರ ಬಿ., ಡಾ| ಮೇಘಾ ಪೈ, ಡಾ| ಸಜ್ಜಾ ವೆಂಕಟೇಶ್ ಮತ್ತು ಡಾ| ಅಭಿಜಿತ್ ಕುಮಾರ್ ಭಾಗವಹಿಸಲಿದ್ದಾರೆ.