ಮೂಡುಬಿದರೆಯ ಆದರ್ಶ ಸಂಸ್ಥೆಯಿಂದ ಸ್ವಾವಲಂಬನಾ ದಿನಾಚರಣೆ

ಮೂಡುಬಿದಿರೆ: ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ (ರಿ.) ಮೂಡುಬಿದಿರೆ ಇದರ ಆಶ್ರಯದಲ್ಲಿ ಸಂಸ್ಥೆಯ ಮೂಲಕ ಪ್ರವರ್ತಿಸಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ಸಂಘಗಳ 23ನೇ ವಾರ್ಷಿಕ ಹಾಗೂ ಸ್ವಾವಲಂಬನಾ ದಿನಾಚರಣೆಯು ವಿಜಯನಗರದ ಆದರ್ಶಧಾಮದಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.ಬೆಂಗಳೂರು ಇದರ ನಿರ್ದೇಶಕಿ ಭಾರತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ಮನುಷ್ಯನಿಗೂ ಬದುಕಲು ಉತ್ತಮವಾದ ಆರೋಗ್ಯ ಮತ್ತು ನೆಮ್ಮದಿ ಇರಬೇಕು. ಅದಕ್ಕಾಗಿ ಹೊಟ್ಟೆಗೆ ಊಟ, ತೊಡಲು ಬಟ್ಟೆ, ಬಾಳಲು ಸೂರು ಮತ್ತು ಮನೆಗೆ ಬಂದಾಗ ಪ್ರೀತಿಸುವ ಕುಟುಂಬ, ಹೊರಗೆ ಹೋದಾಗ ಸಮಸ್ಯೆಗೆ ಸ್ಪಂದಿಸುವ ಬಂಧುಗಳು, ಸ್ನೇಹಿತರು, ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ನಿರ್ಭಯ ಸಮಾಜವಿದ್ದರೆ ನೆಮ್ಮದಿ ಸಾಧ್ಯ ಎಂದರು.

ಕಿನ್ನಿಗೋಳಿ ಇಮ್ಮಾಕ್ಯೂಲೆಟ್ ಕೊನ್ಸೆಪ್ಷನ್ ಚರ್ಚ್‍ನ ವಿಗಾರ್ ರೆ.ಫಾ.ಫೌಸ್ಟಿನ್ ಲೋಬೋ ಸ್ವಾವಲಂಬನಾ ಸಂದೇಶವನ್ನು ನೀಡಿದರು.
ಸಂಸ್ಥೆಯು “ರಾಷ್ಟ್ರೀಯ ಶಿಕ್ಷಣ ನೀತಿ” ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಾದ ಸಹನಾ(ಪ್ರ), ಹೀನಾ ಫರ್ವೀನ್ (ದ್ವಿ) ಹಾಗೂ ಶೃತಿ ಅವರನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಯಿತು. ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ, ಪತ್ರಕರ್ತ ಡಾ.ಶೇಖರ ಅಜೆಕಾರ್ ಅವರ ಪ್ರಬಂಧ ಸ್ಪರ್ಧೆಗಳ ಅವಲೋಕನಗೈದರು. ದ.ಕ.ಸಹಕಾರಿಯ ಸಂಚಾಲಕ ಶ್ರೀವಿಜಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು. ಆದರ್ಶ ಸಂಸ್ಥೆಯ ಉಪಾಧ್ಯಕ್ಷ ಹಸ್ದುಲ್ಲಾ ಇಸ್ಮಾಯಿಲ್, ಆಡಳಿತ ಮಂಡಳಿಯ ಸದಸ್ಯೆ ಶೆರ್ಲಿ ಟಿ.ಬಾಬು, ಸದಸ್ಯ ಇಮಾನ್ಯುವೆಲ್ ಮೋನಿಸ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.