ಗಂಗೊಳ್ಳಿ ಮೀನುಗಾರಿಕಾ ಬಂದರು ಆಧುನಿಕರಣ ಆಡಳಿತ ಮಂಜೂರಾತಿ : ಶಾಸಕ ಗುರುರಾಜ್ ಗಂಟಿ ಹೊಳೆ
ಬೈಂದೂರು: ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಹಾಲಿ ಇರುವ ಮೀನುಗಾರಿಕೆ ಬಂದರುಗಳು ಆಧುನಿಕರಣ ಹಾಗೂ ಇನ್ನಿತರ ನಿರ್ವಹಣೆ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಆಡಳಿತ ಅನುಮೋದನೆ ನೀಡಲಾಗಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದರು.
ಕುಂದಾಪುರ ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನ 22.18 ಕೋಟಿ ರೂ. ಅಂದಾಜು ಮೊತ್ತದ ಮೂಲ ಸೌಕರ್ಯ ಕಾಮಗಾರಿಗಳಿಗೆ ಕೇಂದ್ರದ ಅನುಮೋದನೆ ಆಗಿದ್ದು ರಾಜ್ಯ ಸರ್ಕಾರದ ಆಡಳಿತ ಅನೋಮೋದನೆ ಬಾಕಿ ಇತ್ತು. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ವಿಧಾನ ಮಂಡಲದ ಅಧಿವೇಶನ ದಲ್ಲಿ ಸದನದ ಗಮನ ಸೆಳೆದು ರಾಜ್ಯ ಸರಕಾರದಿಂದ ಕೂಡಲೇ ಆಡಳಿತ ಅನುಮೋದನೆ ನೀಡುವಂತೆ ಆಗ್ರಹಿಸಿದ್ದರು. ಅದರಂತೆ ರಾಜ್ಯ ಸರ್ಕಾರ ಆಡಳಿತ ಅನುಮೋದನೆ ನೀಡಲು ಒಪ್ಪಿದೆ ಎಂದು ಶಾಸಕ ಕಚೇರಿ ಪ್ರಕಟನೆ ತಿಳಿಸಿದೆ.