ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ : ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಕುಡ್ಲ ರನ್ ಮ್ಯಾರಥಾನ್

ಮಂಗಳೂರು: ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕುಡ್ಲ ರನ್ ಮ್ಯಾರಥಾನ್ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯಿತು.

ಕುಡ್ಲ ರನ್‌ಗೆ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ಕಾರ್ಡಿಯೋಲಜಿಸ್ಟ್ ಡಾ. ಪುರುಷೋತ್ತಮ್, ಕಾರ್ಡಿಯೋಲಜಿಸ್ಟ್ ಡಾ. ಮಂಜುನಾಥ್ ಬಿ ವಿ, ಕಾರ್ಡಿಯೋ ತೆರಪಿ ಸರ್ಜರಿ ಡಾ. ಜಯಶಂಕರ್ ಮಾರ್ಲ ಸೇರಿ ಚಾಲನೆ ನೀಡಿದರು.




ಕುಡ್ಲ ರನ್ ಮ್ಯಾರಥಾನ್ ಸ್ಪರ್ಧೆ ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆದಿದ್ದು, ರನ್ನರ್ ಅಪ್ ಅನ್ನು ಸಚಿನ್, ಮಹಿಳಾ ವಿಭಾಗದಲ್ಲಿ ಜಸ್ಮಿತ ಕೊಡೆಂಕಿರಿ ಪಡೆದ್ರು. 45 ವರ್ಷದೊಳಗಿನ ವಿಭಾಗದಲ್ಲಿ ಲಾರ ಪ್ರಾನ್ಸಿಸ್, ಲಕ್ಷ್ಮಣ, 18 ವರ್ಷದೊಳಗಿನ ವಿಭಾಗದಲ್ಲಿ ವಿವೇಕಾನಂದ, ಮಲ್ಲಪ್ಪ, 45ರಿಂದ 60 ವರ್ಷದ ವಿಭಾಗದಲ್ಲಿ ಶ್ರೀಕಾಂತ್ ರಾಜ, ರಜ್ಬೀರ್ ಸಿಂಗ್, 60 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಮಾಧವ, ಕೇಶವ, ಎಜೆ ಆಸ್ಪತ್ರೆ ವಿದ್ಯಾರ್ಥಿ ವಿಭಾಗದಲ್ಲಿ ಸುಮಿನ್, ಜಯಂತ್ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ನಟಿ ನಿರೂಪಕಿ ಸೌಜನ್ಯ ಹೆಗ್ಡೆ, ಮಂಗಳೂರು ರನ್ನರ್ಸ್ ಕ್ಲಬ್ ನ ಅಭಿಲಾಷ್ ಡೊಮಿನಿಕ್, ಅಮಿತ ಡಿಸೋಜ, ಎಜೆ ಆಸ್ಪತ್ರೆ ಆಡಳಿತ ಮಂಡಳಿ ಸಿಬ್ಬಂದಿ ಪ್ರಿಮ್ ರೋಸ್ ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.