ಆಕಾಶವಾಣಿ ಎಫ್.ಎಂ. ರೈನ್ ಬೋ ಕಾಮನಬಿಲ್ಲು 22 ನೇ ವರ್ಷಕ್ಕೆ ಪಾದಾರ್ಪಣೆ : ಕೇಳುಗರ ಸಮೀಕ್ಷೆಯಲ್ಲಿ ಎರಡನೇ ಸ್ಥಾನದಲ್ಲಿ ಕನ್ನಡ ವಾಹಿನಿ

ಬೆಂಗಳೂರು, ಸೆ, 1; ನಾಡಿನ ಶ್ರೋತೃಗಳ ಮನೆಮಾತಾಗಿರುಇವ ಆಕಾಶವಾಣಿ ಎಫ್.ಎಂ. ರೈನ್ ಬೋ – ಕನ್ನಡ ಕಾಮನ ಬಿಲ್ಲು 21 ತುಂಬಿ 22 ನೇ ವರ್ಷಕ್ಕೆ ಕಾಲಿಟ್ಟಿದೆ.
ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಆಕಾಶವಾಣಿ ಆವರಣದಲ್ಲಿ ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾದ ಡಾ. ನಿರ್ಮಲ ಸಿ ಎಲಿಗಾರ್, ತಾಂತ್ರಿಕ ವಿಭಾಗದ ಉಪ ಮಹಾನಿರ್ದೇಶಕರಾದ ನೇಹಾ ಸ್ವಾಮಿ, ಪರಿಸರವಾದಿ, ಎಸ್.ಪಿ.ಪಿ.ಎ ಸಂಸ್ಥೆಯ ಸಂಸ್ಥಾಪಕ ಧ್ರುವ್ ಪಾಟೀಲ್ ಅವರ ನೇತೃತ್ವದಲ್ಲಿ 21 ಗಿಡಗಳನ್ನು ನೆಟ್ಟು, ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ನಿಮರ್ಲ ಸಿ ಎಲಿಗಾರ್, ಎಫ್.ಎಂ. ರೈನ್ ಬೋ ದೇಶದ ಕೇಳುಗರ ಸಮೀಕ್ಷೆಯಲ್ಲಿ ಕಳೆದ ವರ್ಷ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿತ್ತು. ಇದಕ್ಕೆ ಎಲ್ಲಾ ಸಿಬ್ಬಂದಿ ಮತ್ತು ಆರ್.ಜೆ.ಗಳ ಪರಿಶ್ರಮ ಕಾರಣ. ಕಾರ್ಯಕ್ರಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಆಕಾಶವಾಣಿ ಕಾರ್ಯೋನ್ಮುಖವಾಗಿದೆ ಎಂದರು.


ನೇಹ ಸ್ವಾಮಿ ಮಾತನಾಡಿ, ಎಲ್ಲರ ಶ್ರಮದ ಪ್ರತಿಫಲದಿಂದ ಎಂ.ಎಫ್ ರೈನ್ ಬೋ ಕೇಳುಗರ ಗಮನ ಸೆಳೆದಿದೆ. ಬರುವ ದಿನಗಳಲ್ಲಿ ಮತ್ತಷ್ಟು ರಚನಾತ್ಮಕ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸಿದರು.

ಆಕಾಶವಾಣಿ ಕಾರ್ಯಕ್ರಮ ವಿಭಾಗದ ನಿರ್ವಾಹಕರಾದ ಡಾ. ಎ.ಎಸ್. ಶಂಕರನಾರಾಯಣ್ ಮಾತನಾಡಿ, ಕನ್ನಡ ಕಾಮನ ಬಿಲ್ಲು ಇಡೀ ದೇಶದಲ್ಲಿ ಅತ್ಯುತ್ತಮ ವಾಹಿನಿ ಎಂದು ಲೋಕಸಭೆಯಲ್ಲಿ ಶ್ಲಾಘನೆಗೆ ಒಳಗಾಗಿದೆ. ಈಗಲೂ ಅದೇ ಪರಂಪರೆ ಮುಂದುವರೆದಿದೆ. ಸಾರ್ಥಕವಾದ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದರು.
ಎಫ್.ಎಂ. ರೈನೋ ಅಭಿಮಾನಿ ಮತ್ತು ಕೇಳುಗರಾದ ಇ. ನಾಗರಾಜ್ ಮಾತನಾಡಿ, 1978 ರಿಂದ ಆಕಾಶವಾಣಿಯನ್ನು ನಿರಂತರವಾಗಿ ಕೇಳುತ್ತಿದ್ದೇನೆ. ಎಫ್.ಎಂ. ರೈನ್ ಬೋ ಆರಂಭದಿಂದಲೂ ಆಲಿಸುತ್ತಿದ್ದೇನೆ. ಪ್ರತಿ ಆರು ತಿಂಗಳು ಇಲ್ಲವೆ ವರ್ಷಕ್ಕೊಮ್ಮೆ ಕೇಳುಗರ ಜೊತೆ ಸಂವಾದ ಏರ್ಪಡಿಸಿದರೆ ಇನ್ನಷ್ಟು ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಲಿದೆ ಎಂದು ಸಲಹೆ ಮಾಡಿದರು.

ಯುವ ಪ್ತತಿಭಾವಂತ ಗಾಯಕರಾದ ಪ್ರಭಂಜನ್, ನೀರಜ್ ಮತ್ತು ನಿರಂತ್ ತಮ್ಮ ಸುಮಧುರ ಕಂಠದಿಂದ ರಂಜಿಸಿದರು.
ಆಕಾಶವಾಣಿ ಮತ್ತು ದೂರದರ್ಶನದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.