ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ 22ನೇ ವರ್ಷದ ಅಕ್ಷರ ಉತ್ಸವ
ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ ನಡೆಯುವ 22ನೇ ವರ್ಷದ ಸಂಭ್ರಮ “ಅಕ್ಷರ ಉತ್ಸವ” ವು ಶನಿವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು.
ಶಾಲಾ ಪೆÇೀಷಕರ ಸಂಘದ ಅಧ್ಯಕ್ಷ ಅರುಣ್ ಐತಾಳ್ ಅಕ್ಷರ ಉತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರಾ ಮಕ್ಕಳಿಗೆ ಬಹುಮಾನ ವಿತರಿಸಿದರು. ಶಾಲಾ ಸಂಚಾಲಕ ಮೋಹನ್ ರೈ.ಕೆ. ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರು, ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಭಾಸ್ಕರ, ಶಾಲಾ ಕಾರ್ಯದರ್ಶಿ ಭಾರತಿ ಎಸ್.ರೈ, ಶೈಕ್ಷಣಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಆಕರ್ಷಿಣಿ ಜೈನ್, ಮುಖ್ಯ ಶಿಕ್ಷಕ ಮೋಹನ್ ಎಚ್., ಅಕ್ಷರ ಉತ್ಸವ ನಿರ್ದೇಶಕ ಸುಕೇಶ್ ಕೆ., ಹಿರಿಯ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಶ್ರುತನ್ ಶೆಟ್ಟಿ, ವಿದ್ಯಾರ್ಥಿ ನಾಯಕ ಮನ್ವಿತ್ ಮೊದಲಾದವರಿದ್ದರು. ಶಿಕ್ಷಕಿಯರಾದ ಶ್ವೇತ ಸ್ವಾಗತಿಸಿದರು. ಲಕ್ಷ್ಮೀ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಆಲದಪದವು ಕಾರ್ಯಕ್ರಮ ನಿರೂಪಿಸಿದರು.