ಅಳಪೆಯ ಶ್ರೀ ಮಹಾದೇವಿ ಭಜನಾ ಮಂಡಳಿ 24ನೇ ವರ್ಷದ ಸಮವಸ್ತ್ರ ವಿತರಣೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಮಂಗಳೂರಿನ ಅಳಪೆಯ ಶ್ರೀ ಮಹಾದೇವಿ ಭಜನಾ ಮಂಡಳಿಯ ವತಿಯಿಂದ 24ನೇ ವರ್ಷದ ಸಮವಸ್ತ್ರ ವಿತರಣೆ, ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಮಂದಿರದ ಸದಸ್ಯರಾದ ಸುರೇಶ್ ಸಾಲಿಯಾನ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ 42 ಮಂದಿಗೆ ಸಮವಸ್ತ್ರ ವಿತರಣೆ, 26 ಮಂದಿಗೆ ವಿದ್ಯಾರ್ಥಿ ವೇತನ, 18 ಮಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಂದಿರ ಅಧ್ಯಕ್ಷರಾದ ಚಂದ್ರನಾಥ್ ಸಾಲ್ಯಾನ್ ಗೌರವಾಧ್ಯಕ್ಷರಾದ ಡಾ. ರಾಘವೇಂದ್ರ ಎ ಭಟ್, ಮಂದಿರದ ಕಾರ್ಯದರ್ಶಿ ಸುರೇಶ್ ಎಸ್. ಅರಬಳ್ಳಿ, ಸುಧಾಕರ್ ರಾವ್ ಪಾಟೀಲ್, ವಿಘ್ನೇಶ್ ಭಟ್, ಶೋಭಾ ಪೂಜಾರಿ, ಡಾ. ಜಯಪ್ರಕಾಶ್, ಡಾ. ಬಿಂದುರಾಣಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವತ್ಸಲ ಪಿ. ಮಲ್ಲಿ ಮತ್ತು ಸುಧೀರ್ ಶೆಟ್ಟಿ ಅವರು ನಿರೂಪಿಸಿದರು. ಮಂದಿರದ ಸದಸ್ಯ ಸೀತರಾಮ ಗಟ್ಟಿ ಧನ್ಯವಾದ ಸಮರ್ಪಣೆ ಮಾಡಿದರು.