ಮಂಗಳೂರು ಸ್ಫೋಟ ಪ್ರಕರಣದಿಂದ ಪಾಠ ಕಲಿಯಬೇಕಿದೆ : ಎಡಿಜಿಪಿ ಅಲೋಕ್ ಕುಮಾರ್
![alok kumar](http://v4news.com/wp-content/uploads/2022/11/Fullscreen-capture-23-11-2022-130801.jpg)
ಬೆಂಗಳೂರು: ‘ಮಂಗಳೂರು ಸ್ಫೋಟ ಪ್ರಕರಣದಿಂದ ನಾವೆಲ್ಲರೂ ಪಾಠ ಕಲಿಯಬೇಕಿದೆ’ ಎಂದು ಎಡಿಜಿಪಿ ಅಲೋಕ್ ಕುಮಾರ್ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
![alok kumar](http://v4news.com/wp-content/uploads/2022/11/357403-1669187339.jpg)
ಈ ಕುರಿತು ಟ್ವೀಟ್ ಮಾಡಿರುವ ಅವರು, ” ಮಂಗಳೂರು ಸ್ಫೋಟ ಪ್ರಕರಣದಿಂದ ಪಾಠ ಕಲಿಯಬೇಕಿದೆ. ನಿಮ್ಮ ಆಧಾರ್ ಕಳೆದುಕೊಂಡಾಗ ಎಚ್ಚರಿಕೆ ಇರಲಿ. ಸಾರ್ವಜನಿಕರು ತಮ್ಮ ಗುರುತಿನ ಚೀಟಿ ಬಗ್ಗೆ ಎಚ್ಚರ ವಹಿಸಬೇಕು. ಐಡಿ ಕಾರ್ಡ್ ದುರ್ಬಳಕೆಗೆ ಕಡಿವಾಣ ಹಾಕಿ ಅಪರಿಚಿತರಿಗೆ ಬಾಡಿಗೆ ಕೊಡುವ ಮುನ್ನ ಪರಿಶೀಲಿಸಿ, ಮನೆಯ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿರಬೇಕು” ಎಂದು ಸಲಹೆ ನೀಡಿದ್ದಾರೆ.