ಗೊನ್ಝಾಗ ಯುವಪ್ರತಿಭೆ ಸಾಹಿತ್ಯಿಕ ಅನಾವರಣ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ದಶಮಾನೋತ್ಸವ ಸಂದರ್ಭದಲ್ಲಿ 15ರ ಹರೆಯದ ಬಾಲ ಸಾಹಿತಿ ಸಾಹಿತಿ ಶಿನೈದ್ ಫೆರ್ನಾಂಡಿಸ್ ಅವರ ಎರಡನೆಯ ಕೃತಿ ‘ದಿ ಸರ್ಚ್’ ಅನಾವರಣಗೊಳಿಸಲಾಯಿತು. ಮೊದಲ ಕೃತಿ ‘ದಿ ಇನ್ಸಿಡೆಂಟ್’ 2022 ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಶಿನೈದ್ ಫೆರ್ನಾಂಡಿಸ್ ರವರು, ಶ್ರೀಮತಿ ಶರಲ್ ಮತ್ತು ಸಮಿತ್ ಫೆರ್ನಾಂಡಿಸ್ ಅವರ ಪುತ್ರಿಯಾಗಿದ್ದು, ಗೊನ್ಝಾಗ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಕರ್ನಾಟಕ ಜೆಸ್ಯೂಟ್ ಪ್ರಾಂತ ಪ್ರೋವಿಂಶಿಯಲ್ರೆ .ಫಾ ಡೈನೀಶಿಯಸ್ ವಾಸ್ ಎಸ್ ಜೆ, ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ರೆ .ಫಾ.ಮೆಲ್ವಿನ್ ಜೋಸೆಫ್ ಪೀಂಟೋ, ಸ್ಥಾಪಕ ಪ್ರಾಂಶುಪಾಲರಾಗಿದ್ದ ಶ್ರೀಮತಿ ಗ್ರೇಸ್ನೊ ರೋನ್ಹ, ಮಾಜಿ ರೆಕ್ಟರ್ ರೆ.ಫಾ ಡೆಂಜಿಲ್ ಲೋಬೋ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ಮೆಲ್ವಿನ್ ಅನಿಲ್ ಲೋಬೊ ಎಸ್ ಜೆ, ಹಾಗೂ ಉಪಪ್ರಾಂಶುಪಾಲರಾದ ಲಾರೆಲ್ ಡಿ’ಸೋಜ ಉಪಸ್ಥಿತರಿದ್ದರು. ಶಿನೈದ್ ಅವರ ಅಪೂರ್ವ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ