ಗೊನ್ಝಾಗ ಶಾಲೆಯಲ್ಲಿ ಆರೋಗ್ಯ ಅಭಿಯಾನ
ವಿಶ್ವ ಫಿಸಿಯೋಥೆರಪಿ ದಿನಾಚರಣೆ ಅಂಗವಾಗಿ ಸಂತ ಅಲೋಷಿಯಸ್ ಗೊನ್ಝಾಗ ಶಾಲೆಯಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಪಿ ವಿಭಾಗ, ಮಂಗಳೂರು ರೌಂಡ್ ಟೇಬಲ್ 115 ಹಾಗೂ ಮಂಗಳೂರು ಲೇಡೀಸ್ ಸರ್ಕಲ್ 82 ಇವರ ಸಹಯೋಗದಿಂದ 1 ರಿಂದ 10 ತರಗತಿಯ ಮಕ್ಕಳಿಗಾಗಿ ಆರೋಗ್ಯ ಅಭಿಯಾನ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಮಂಗಳೂರಿನ ಪ್ರತಿಷ್ಠಿತ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ ರಿಂಕು ರೋಷನ್ ಮಾತನಾಡಿ ಉತ್ತಮ ಆಹಾರ ಸೇವನೆ, ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಮುಂತಾದ ಉತ್ತಮ ಹವ್ಯಾಸಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿದರು. ಸಂಪನ್ಮೂಲ ವ್ಯಕ್ತಿ ಸಹ ಪ್ರಾಧ್ಯಾಪಕರಾದ ಡಾ. ಎಂ. ಸಹನಾ ಕಾಮತ್ ಮಾತನಾಡಿ ಆರೋಗ್ಯಕರ ಜೀವನ ಶೈಲಿ, ಆಹಾರ ಕ್ರಮ, ದೈಹಿಕ ಚಟುವಟಿಕೆ,ನೀರಿನ ಮಹತ್ವ ಇತ್ಯಾದಿ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಂಬಂಧಿತ ನಾಟಕ ಪ್ರದರ್ಶಿಸಲಾಯಿತು.ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪ್ರಾಂಶುಪಾಲರಾದ ರೆ.ಫಾ.ಮೆಲ್ವಿನ್ ಅನಿಲ್ ಲೋಬೊ ಎಸ್.ಜೆ ಉಪಪ್ರಾಂಶುಪಾಲೆ ಶ್ರೀಮತಿ ಲಾರೆಲ್ ಡಿ’ಸೋಜ, ಶ್ರೀ ರಾಯಸ್ಟರ್ ಡಿ’ಸೋಜ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಅಪರ್ಣ ಸುರೇಶ ಸ್ವಾಗತಿಸಿದರೆ ಶ್ರೀಮತಿ ಅರುಣಿಮಾ ತುಳಸಿದಾಸ್ ಧನ್ಯವಾದವಿತ್ತರು.