ಆಲೂರಿನ ಪ.ಪಂ. ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ : ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪರದಾಟ

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಪಟ್ಟಣದ ಕೊನೆ ಪೇಟೆಯಿಂದ ಕೆಇಬಿ ಸರ್ಕಲ್ ತನಕ ರಸ್ತೆಯ ಎರಡೂ ಬದಿಗಳಲ್ಲಿ ದ್ವಿಚಕ್ರ ವಾಹನ ಹಾಗೂ 4 ಚಕ್ರದ ಲಘು ವಾಹನಗಳಿಗೆ ನಿಗದಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ಸಾರ್ವಜನಿಕರು ಹಾಗೂ ಪ್ರತಿನಿತ್ಯ ವಿವಿಧ ಇಲಾಖೆಗಳಿಗೆ ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ವಾಹನ ಪಾರ್ಕಿಂಗ್ ಸಮಸ್ಯೆ ದೊಡ್ಡ ತಲೆನೋವಾಗಿದೆ.

ಪಟ್ಟಣದ ರಸ್ತೆಯು ಕಿರಿದಾಗಿದ್ದು ರಸ್ತೆಯ ಎರಡೂ ಬದಿಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ವಾಹನ ನಿಲುಗಡೆಗೆ ಪ್ರದೇಶವು ಇಲ್ಲದ ಕಾರಣ, ಸಾರ್ವಜನಿಕರು ಸರ್ಕಾರಿ ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯ ಮಳಿಗೆಗಳ ಮುಂಭಾಗ, ತರಕಾರಿ ಮಾರುಕಟ್ಟೆ ಮುಂಭಾಗ, ಕೆಲವೇ ವಾಹನಗಳನ್ನು ನಿಲ್ಲಿಸುವಷ್ಟು ಜಾಗವಿದ್ದು ಉಳಿದ ಸಾರ್ವಜನಿಕರು ವಾಹನ ನಿಲುಗಡೆಗೆ ಜಾಗವಿಲ್ಲದೆ ಕೆಎಸ್ ಆರ್ ಟಿಸಿ ನಿಲ್ದಾಣದ ಒಳಗೆ ಹಾಗೂ SಃI ಬ್ಯಾಂಕ್ ಮುಂಭಾಗ, ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಕಾಂಪೌಂಡ್ ಮುಂಭಾಗ ಹಾಗೂ ಒಳಭಾಗಗಳಲ್ಲಿ ವಾಹನಗಳನ್ನು ಎರಡೆರಡು ಸಾಲು ನಿಲ್ಲಿಸಿರುತ್ತಾರೆ. ಪ್ರತಿನಿತ್ಯ ಸಂಚರಿಸುವ ವಾಹನಗಳಿಗೆ ಹಾಗೂ ತುರ್ತು ಸೇವೆಗಾಗಿ ಇರುವ ಆಂಬ್ಯುಲೆನ್ಸ್ ಸೇವೆಗೆ ಜಾಗವಿಲ್ಲದಂತೆ ವಾಹನಗಳನ್ನು ನಿಲುಗಡೆ ಮಾಡಿರುತ್ತಾರೆ. ದಿನನಿತ್ಯ ಶಾಲಾ ಮಕ್ಕಳು ಸಾರ್ವಜನಿಕರು ವ್ಯವಸ್ಥಿತ ರೀತಿಯಲ್ಲಿ ಓಡಾಡಲು ಅನುಕೂಲ ವಿಲ್ಲದಂತೆ ವಾಹನಗಳನ್ನು ನಿಲ್ಲುಗಡೆ ಮಾಡಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದರೂ ಏನೂ ಪ್ರಯೋಜನ ಇಲ್ಲದಂತಾಗಿದೆ.

Related Posts

Leave a Reply

Your email address will not be published.