ಆಲೂರು : ಕಲುಷಿತ ಆಹಾರ ಸೇವನೆಯಿಂದ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಹಾಸನದ ಆಲೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳು ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಶಾಲೆಗೆ ಶಾಸಕ ಎಚ್ ಕೆ ಕುಮಾರಸ್ವಾಮಿ ನೀಡಿ, ಪರಿಶೀಲನೆ ನಡೆಸಿದ್ರು. ಅಡುಗೆ ಕೊಠಡಿ, ಸಾಮಗ್ರಿಗಳ ಕೊಠಡಿ, ಆಹಾರ ಪದಾರ್ಥಗಳನ್ನು ಪರೀಶೀಲನೆ ಮಾಡಿ, ಶಾಲಾ ಕೊಠಡಿಗಳು, ಸ್ನಾನಗೃಹಗಳು, ಶೌಚಲಯಕ್ಕೆ ಭೇಟಿ ನೀಡಿದ್ರು.

ನಂತರ ಮಾತನಾಡಿದ ಅವರು ಸದ್ಯ ಈ ವಸತಿ ಶಾಲೆ ಕಟ್ಟಡದಲ್ಲಿ 204 ಮಕ್ಕಳು ಇದ್ದು 25 ಮಕ್ಕಳಿಗೆ ವಾಂತಿ ಬೇಧಿ ಸುಸ್ತು ಕಾಣಿಸಿಕೊಂಡಿದ್ದು. ಚಿಕಿತ್ಸೆ ಗಾಗಿ ಹಾಸನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಮಕ್ಕಳಿಗೆ ಯಾವುದೇಪ್ರಾಣ ಪಾಯವಿಲ್ಲ ಮಕ್ಕಳು ಸುರಕ್ಷಿತರಾಗಿದ್ದಾರೆ. ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಳ್ಳಲು ಕಾರಣ ಏನೆಂಬುದನ್ನು ತಿಳಿಯಲು ಆಹಾರ ಪದಾರ್ಥಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ . ಪ್ರಯೋಗಾಲಯದಿಂದ ರಿಪೆÇೀರ್ಟ್ ಬರುವವರೆಗೂ ನಾವೆಲ್ಲ ಕಾಯುತ್ತಿದ್ದೇವೆ ವರದಿ ಬಂದ ನಂತರವೇ ಕಾರಣವೇನೆಂಬುದು ತಿಳಿಯಬೇಕಿದೆ. ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಮಂಜುನಾಥ್, ತಾಲೂಕು ಆಡಳಿತಾಧಿಕಾರಿ ಡಾಕ್ಟರ್ ತಿಮ್ಮಯ್ಯ, ಆಲೂರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪುಂಡಲಿಕ ಮೊದಲಾದವರು ಉಪಸ್ಥತರಿದ್ದರು.
