ಡಿ 21ರಿಂದ 27 ರವರೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಭಾರತ್ ಸ್ಕೌಟ್ಸ್-ಗೈಡ್ಸ್

ಭಾರತ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಮತ್ತು ದ.ಕ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್‍ನ ಸಾಂಸ್ಕøತಿಕ ಜಾಂಬೂರಿ-2022 ಕಾರ್ಯಕ್ರಮ ಡಿಸೆಂಬರ್ 21 ರಿಂದ 27ರ ವರೆಗೂ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಹೇಳಿದರು.

ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬೆಡನ್ ಪೋಲ್ ಅವರು 1907ರಲ್ಲಿ ಇಂಗ್ಲೇಂಡ್‍ನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ನಮ್ಮ ರಾಜ್ಯದಲ್ಲಿ ಇದಕ್ಕೆ 115 ವರ್ಷಗಳ ಇತಿಹಾಸವಿದೆ. ಅಷ್ಟೆ ಅಲ್ಲದೆ ದ.ಕ ಜಿಲ್ಲೆಗೆ ಈ ಆಂದೋಲನ ಬಂದು 100 ವರ್ಷಗಳು ಪೂರೈಸಿದೆ ಎಂದು ಹೇಳಿದರು. ಇಂತಹ ಸಂದರ್ಭದಲ್ಲಿ ಪಿ ಜಿ ಆರ್ ಸಿಂದ್ಯಾ ಅವರಿಗೆ ತಮ್ಮ ರಾಜ್ಯದಲ್ಲಿ ಒಂದು ಅಂತರರಾಷ್ಟ್ರೀಯ ಮಟ್ಟದ ಜಾಂಬೂರಿ ಆಗಬೇಕೆಂಬ ಆಶಯ ವ್ಯಕ್ತಪಡಿಸಿದ್ದು, ಅಂತರರಾಷ್ಟ್ರೀಯ ಸ್ಕೌಟ್-್ಸಗೈಡ್ಸ್ ಸಾಂಸ್ಕøತಿಕ ಜಾಂಬೂರಿ ಎಂಬ ಹೆಸರಿನಲ್ಲಿ ಈ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಹೇಳಿದರು.

ಆನಂತರ ಭಾರತ್ ಸ್ಕೌಟ್ಸ್-ಗೈಡ್ಸ್ ಇದರ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ. ಆರ್ ಸಿಂಧ್ಯಾ ಅವರು ಮಾತನಾಡಿದ, ಪ್ರಥಮ ಬಾರಿಗೆ ಭಾರತ ದೇಶದಲ್ಲಿ ನಡೆಯುತ್ತಿರುವಂತಹ ಮೊದಲ ಸಾಂಸ್ಕøತಿಕ ಜಾಂಬೂರಿಯ ಚಟುವಟಿಕೆ ಇದಾಗಿದೆ. ಇದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದು ಆಶಯದಂತೆ ಈ ಅಮೃತ ಮಹೋತ್ಸವವನ್ನು ವಿವಿಧ ಕಡೆಗಳಲ್ಲಿ ದೇಶಾದ್ಯಂತ ಆಚರಣೆ ಮಾಡಿದ್ದೇವೆ. ಅದರ ಸವಿ ನೆನಪಿನಲ್ಲಿ ಈ ಒಂದು ಜಂಬೂರಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್-ಗೈಡ್ಸ್ ಇಂಟರ್‍ನ್ಯಾಷನಲ್ ಡೆಪ್ಯುಟಿ ಕಮಿಷನರ್ ಮಧುಸೂದನ್ ಹಾಗೂ ಅಂತರರಾಷ್ಟ್ರೀಯ ಸಾಂಸ್ಕøತಿಕ ಜಾಂಬೂರಿ ಸಂಯೋಜಕರು ನವೀನ್ ಅಂಬೂರಿ ಉಪಸ್ಥಿತರಿದ್ದರು.

vip's last bench

Related Posts

Leave a Reply

Your email address will not be published.