ಸಿಬಿಎಸ್‍ಸಿ 10ನೇ ತರಗತಿಯ ಫಲಿತಾಂಶ ಪ್ರಕಟ : ಆಳ್ವಾಸ್ ಕೇಂದ್ರೀಯ ಶಾಲೆಗೆ ಶೇ.100 ಫಲಿತಾಂಶ

ಮೂಡುಬಿದಿರೆ: ಸಿಬಿಎಸ್‍ಸಿ 10ನೇ ತರಗತಿಯ ಪರೀಕ್ಷೆಯಲ್ಲಿ ಆಳ್ವಾಸ್ ಕೇಂದ್ರೀಯ ಶಾಲೆಯು ಸತತ ಮೂರನೇ ವರ್ಷವೂ ಶೇ.100 ಫಲಿತಾಂಶ ದಾಖಲಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಹೇಳಿದರು.
173 ಬಾಲಕರು ಮತ್ತು 71 ಬಾಲಕಿಯರು ಸೇರಿದಂತೆ ಒಟ್ಟು 244 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ತೇರ್ಗಡೆಯಾಗಿದ್ದಾರೆ. 8 ವಿದ್ಯಾರ್ಥಿಗಳು ಶೇ 95ಕ್ಕಿಂತಲೂ ಅಧಿಕ ಅಂಕ ಪಡೆದಿದ್ದಾರೆ. ನಿರೀಕ್ಷಾ 480 (ಶೇ.96), ಪ್ರಜ್ವಲ್ ಕಾಖಂಡ್ಕಿ 479 (ಶೇ95.80), ಅಹ್ಮದ್ ಸಾಜಿಲ್ 478 (ಶೇ.95.60), ಧನುಶ್ ಸಂಜೀವ ಚಿತ್ರಾಕ್ಷಿ 478 (ಶೇ.95.60), ಆರೋಹಣ್ ಸಿದ್ಧಾರ್ಥ ಕುಮ್ತೇಕರ್ 477 (ಶೇ.95.40), ವಿಕಾಸ್ ಗುಂಡೂರಾವ್ ಶಿಂಗಡಿ 477 (ಶೇ.95.40), ಸಿಯಾ ಜೆ.ಕರ್ಕೇರ 475 (ಶೇ.95), ಸಾಕ್ಷಿ ಆರ್.ಪೈ 475 (ಶೇ.95) ಶೇ.95ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.
ಶೇ.90 ಹಾಗೂ ಅಧಿಕ ಅಂಕ 25, ಶೇ.80 ಹಾಗೂ ಅಧಿಕ 45, ಶೇ.70 ಹಾಗೂ ಅಧಿಕ 69, ಶೇ.60 ಹಾಗೂ ಅಧಿಕ 54, ಶೇ.50 ಹಾಗೂ ಅಧಿಕ 40 ವಿದ್ಯಾರ್ಥಿಗಳು ಪಡೆದಿದ್ದಾರೆ.

ಪ್ರಾಂಶುಪಾಲ ಮೊಹಮ್ಮದ್ ಶಫಿ ಶೇಕ್, ಸಹಾಯಕ ಆಡಳಿತ ಅಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ, ಉಪ ಪ್ರಾಂಶುಪಾಲ ಶೈಲಜಾ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.