ಜಾಂಬೂರಿ ಖುಷಿಯೊಂದಿಗೆ ಕುತೂಹಲ ಮೂಡಿಸಿದೆ : ಶಾಸಕ ಉಮಾನಾಥ ಕೋಟ್ಯಾನ್

ಮೂಡುಬಿದಿರೆ: ಡಿ.21-27 ಅಂತರಾಷ್ಡ್ರೀಯ ಮಟ್ಟದ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಹಬ್ಬ ಜಾಂಬೂರಿ ನನ್ನ ಕ್ಷೇತ್ರದ ಮೂಡುಬಿದಿರೆ ತಾಲೂಕಿನಲ್ಲಿ ನಡೆಯುತ್ತಿರುವುದಕ್ಕೆ ನನಗೆ ಖುಷಿಯೊಂದಿಗೆ ಕುತೂಹಲ ಮೂಡಿಸಿದೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದ್ದಾರೆ. ವಿದ್ಯಾಗಿರಿಯ 100 ಎಕರೆ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅಂತರಾಷ್ಟ್ರೀಯ ಮಟ್ಟದ ಜಾಂಬೂರಿ ನಮ್ಮ ದೇಶದಲ್ಲಿ ಇದೀಗ ಮೊದಲ ಬಾರಿ ನಡೆಸಲು ಅವಕಾಶ ಸಿಕ್ಕಿದ್ದು ಇನ್ನು ಇದು 40 ಅಥವಾ 50 ವರ್ಷಗಳ ನಂತರ ನಮ್ಮ ದೇಶಕ್ಕೆ ಬರಬಹುದು. ಅಂತರಾಷ್ಟ್ರೀಯ ಮಟ್ಟದ ಜಾಂಬೂರಿಗೆ ಜಗತ್ತಿನ ಎಲ್ಲಾ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಆಗಮಿಸಲಿದ್ದು ಈಗಾಗಲೆ 50,000 ಮಂದಿ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ.
ದಿನವೊಂದಕ್ಕೆ ಒಂದು ಲಕ್ಷದಷ್ಟು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕರ್ನಾಟಕ ರಾಜ್ಯದ ಹಾಗೂ ಕೇಂದ್ರದ ಮಂತ್ರಿಗಳು ಈ ಜಾಂಬೂರಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ್ತು ಕಾರ್ಯಕರ್ತರಿಂದ ದೊಡ್ಡ ಮಟ್ಟದಲ್ಲಿ ಹೊರೆಕಾಣಿಕೆಯೂ ಬರಲಿದೆ. ದೇಶ ವಿದೇಶದ ಜನ ಹಾಗೂ ವಿದ್ಯಾರ್ಥಿಗಳು ನಮ್ಮ ತುಳುನಾಡಿನ ಸಂಸ್ಕೃತಿ ಹಾಗೂ ಜಾನಪದ ಕ್ರೀಡೆಯನ್ನು ನೋಡಬೇಕೆಂಬ ಉದ್ದೇಶದಿಂದ ಡಿ.24-25ರಂದು ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳವನ್ನು ಕೂಡಾ ಆಯೋಜಿಸಿದೆ. ಒಂದು ವಾರದ ಕಾಲ ಮೂಡುಬಿದಿರೆಯು ಜಾತ್ರಾ ಮಹೋತ್ಸವದಂತೆ ಆಗಲಿದೆ. ಒಟ್ಟಾರೆಯಾಗಿ ನಾನು ಮೂಡುಬಿದಿರೆಯಲ್ಲಿ ಶಾಸಕನಾಗಿರುವ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಕೌಟ್ ಗೈಡ್ಸ್ ಜಾಂಬೂರಿ ಆಗುತ್ತಿರುವುದು ಇದು ನನ್ನ ಭಾಗ್ಯ ಎಂದರು.
