ಅಕ್ಟೋಬರ್ 14 ಮತ್ತು 15ರಂದು ಆಳ್ವಾಸ್ ಪ್ರಗತಿ-2022, ಬೃಹತ್ ಉದ್ಯೋಗ ಮೇಳ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ ಅಕ್ಟೋಬರ್ 14 ಮತ್ತು 15 ರಂದು ಮೂಡಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಹೇಳಿದರು.
ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿ, ಕಳೆದ 11 ವರ್ಷಗಳಿಂದ ಉದ್ಯೋಗ ಮೇಳವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಇದು 12ನೇ ವರ್ಷದ ಉದ್ಯೋಗ ಮೇಳವನ್ನು ಅಕ್ಟೋಬರ್ 14 ಮತ್ತು 15 ಎರಡು ದಿನಗಳ ಕಾಲ ಆಯೋಜಿಸುತ್ತಿದ್ದೇವೆ. ಳ್ವಾಸ್ ಪ್ರಗತಿಯ ಉದ್ಯೋಗ ಮೇಳ ಕೇವಲ ಮೂಡಬಿದಿರೆಯಲ್ಲಿ ಮಾತ್ರವಲ್ಲದೆ ಬೆಳ್ತಂಗಡಿ, ಬಂಟ್ವಾಳ, ಚಿಕ್ಕಬಳ್ಳಾಪುರದ ಊರುಗಳಲ್ಲಿಯೂ ಉದ್ಯೋಗ ಮೇಳÀ ನಡೆಯಲಿದೆ. ಈ ಸಾಲಿನ ಉದ್ಯೋಗಮೇಳದಲ್ಲಿ 200ಕ್ಕೂ ಹೆಚ್ಚಿನ ಕಂಪನಿಗಳು ನೊಂದಾಯಿಸಿಕೊಂಡಿದ್ದು, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಹಲವು ರಂಗದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹತಾ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಕಲ್ಪಿಸುವಂತಹ ಪ್ರಯತ್ನ ನಡೆಯಲಿದೆ ಎಂದು ಹೇಳಿದರು.
ಆನಂತರ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಅವರು ಮಾತನಾಡಿ, ಈಗಾಗಲೇ 195 ಕಂಪನಿಗಳು ಆನ್‍ಲೈನ್ ರಿಜಿಸ್ಟ್ರೇಷನ್ ಹಾಗೂ 15 ಕಂಪನಿಗಳು ಓರಲ್ ರಿಜಿಸ್ಟ್ರೇಷನ್ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯ ಪದವಿ ವಿದ್ಯಾರ್ಥಿಗಳಾದ ಬಿಕಾಂ, ಬಿಎ ಬಿಬಿಎಮ್ ಮೊದಲದವರಿಗೆ ಆದ್ಯತೆ ದೊರೆಯಲಿದೆ. ಅಲ್ಲದೆ 200ಕ್ಕೂ ಹೆಚ್ಚು ಮೆಕಾನಿಕಲ್ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರೈನಿಂಗ್ ಆ್ಯಂಡ್ ಪ್ಲೇಸ್‍ಮೆಂಟ್ ಮುಖ್ಯಸ್ಥರಾದ ಸುಶಾಂತ್ ಅನಿಲ್ ಲೋಬೋ ಮತ್ತು ಆಳ್ವಾಸ್ ಪ್ರಗತಿಯ ಮಾದ್ಯಮ ಸಂಯೋಜಕರಾದ ಪ್ರಸಾದ್ ಶೆಟ್ಟಿ ಅವರು ಉಪಸ್ಥಿತರಿದ್ದರು.
