ಬೆಳ್ತಂಗಡಿಯ ಆನಾರು ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ

ನಮ್ಮಲ್ಲಿರುವ ಒಳ್ಳೆ ಗುಣಗಳನ್ನು ಬೆಳೆಸಬೇಕು.ನಮ್ಮನ್ನು ನಾವು ಗುರುತಿಸಿ ಕೊಳ್ಳಬೇಕು ಎಂದು ಮೂಡಬಿದ್ರೆಯ ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್ ಹೇಳಿದರು. ಅವರು ಬೆಳ್ತಂಗಡಿ ತಾಲೂಕಿನ ಅನಾರು ದೇವಸ್ಥಾನದಲ್ಲಿ ಧಾರ್ಮಿಕ ಭಾಷಣದಲ್ಲಿ ಮಾತನಾಡಿ ದೇವರನ್ನು ನಾವು ನಮ್ಮ ಹೃದಯದಲ್ಲಿ ಕಾಣಬೇಕು. ಜೀವನದಲ್ಲಿ ದೇವರು ಮೆಚ್ಚುವಂತಹ ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದರು. ನಂತರ ಉಳಿಯ ಬೀಡಿನ ನಿತೇಶ್ ಬಲ್ಲಾಳ್ ಮಾತನಾಡಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ವೇದಿಕೆಯಲ್ಲಿ ಉದ್ಯಮಿ ಗಣೇಶ್ ಕಲಾಯಿ, ಶರತ್ ಚಂದ್ರ, ಹರೀಶ್ ಉಪಸ್ಥಿತರಿದ್ದರು.
