ಏ.16 : ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಪುತ್ತೂರು: ಡಾ.ಪಿ.ಬಿ.ರೈ ಪ್ರತಿಷ್ಠಾನದ ನೂಜಿ ತರವಾಡು ಮನೆ ಮಾಡಾವು ಇದರ ವತಿಯಿಂದ ದಿ.ಅಣಿಲೆ ವೆಂಕಪ್ಪ ರೈಗಳ ಹೆಸರಿನಲ್ಲಿ ಕಳೆದ 25 ವರ್ಷಗಳಿಂದ ಪ್ರದಾನ ಮಾಡಲಾಗುತ್ತಿರುವ `ಅಣಿಲೆ ವೆಂಕಪ್ಪ ರೈ’ ಪ್ರಶಸ್ತಿಯನ್ನು ಈ ಬಾರಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ನಾಲ್ವರಿಗೆ ಪ್ರದಾನ ಮಾಡಲಾಗುವುದು ಎಂದು ಡಾ.ಪಿ.ಬಿ.ರೈ ಪ್ರತಿಷ್ಠಾನದ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಎ.16ರಂದು ಬೆಳಿಗ್ಗೆ ಗಂಟೆ 10.30ಕ್ಕೆ ದಂಬೆಕ್ಕಾನ ಬಾಳಮೂಲೆ ಪಟ್ಟೆ ಮನೆಯಲ್ಲಿ ಜರುಗಲಿದೆ. ನ್ಯಾಯ, ಧರ್ಮ, ಸತ್ಯ ಕ್ಕೆ ಹೆಚ್ಚು ಒತ್ತು ಕೊಟ್ಟು ತನ್ನ ಜೀವನವನ್ನೇ ಅದರಲ್ಲಿ ಮುಡಿಪಾಗಿಟ್ಟುಕೊಂಡು ಯಾರಲ್ಲೂ ಚಿಕ್ಕಾಸ್ ಪಡೆಯದೆ ಸಮಾಜದಲ್ಲಿ ಗುರುತಿಸಿಕೊಂಡ ದಂಬೆಕಾನ ಸದಾಶಿವ ರೈ ಅವರು ಪ್ರತಿ ವರ್ಷ ಸಮಾಜದ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಬಾರಿ ದಂಬೆಕ್ಕಾನ ಸದಾಶಿವ ರೈ ಅವರ ಸಹೋದರ ದಂಬೆಕ್ಕಾನ ಐತ್ತಪ್ಪ ರೈ, ಬಾಳೆಮೂಲೆ ಪಟ್ಟೆ, ಚೆಲ್ಮೆತ್ತಾರು ಸಂಜೀವ ರೈ, ಕೆ.ವಿ.ಜಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನನ್ ಅಧ್ಯಕ್ಷ ಕೆ.ವಿ.ಚಿದಾನಂದ ಮತ್ತು ಸುಳ್ಯದ ಶಾಸಕ ಎಸ್.ಅಂಗಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು. ನಿವೃತ್ತ ಐ.ಎ.ಎಸ್.ಅಧಿಕಾರಿ ಪ್ರಮೋದ್ ಕುಮಾರ್ ರೈ ಮತ್ತು ವಿಜಯ ಬ್ಯಾಂಕ್ ನಿವೃತ್ತ ಎ.ಜಿ.ಎಮ್ ಎ.ಕೃಷ್ಣ ರೈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಪ್ರತಿಕೋದ್ಯಮಿ ಮೂಡಂಬೈಲು ನಾರಾಯಣ ಶೆಟ್ಟಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಪಿ.ಬಿ.ರೈ ಪ್ರತಿಷ್ಠಾನದ ಅಧ್ಯಕ್ಷರಾದ ದಂಬೆಕ್ಕಾನ ಸದಾಶಿವ ರೈ ಉಪಸ್ಥಿತರಿದ್ದರು.