ಬೈಂದೂರಿನ ನಾಗೂರಿನಲ್ಲಿ ತಾಳಮದ್ದಳೆ ಸಪ್ತಾಹ : ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಂದ ಉದ್ಘಾಟನೆ
ಬೈಂದೂರು: ನಾಗೂರಿನ ಗೋಪಾಲಕೃಷ್ಣ ಕಲಾಮಂದಿರದ ಕೋಟ ವೈಕುಂಠ ನಾಯಕ್ ಸ್ಮರಣ ವೇದಿಕೆಯಲ್ಲಿ ಧಾರೇಶ್ವರ ಯಕ್ಷಬಳಗ ಚಾರಿಟೆಬಲ್ ಟ್ರಸ್ಟ್ ಕಿರಿಮಂಜೇಶ್ವರ ವತಿಯಿಂದ ಸೆ.18ರಿಂದ ಸೆ.24ರವರೆಗೆ ಯಕ್ಷಗಾನ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮವನ್ನು ಯಕ್ಷ ಪ್ರೇಮಿ ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಉದ್ಘಾಟನೆ ಮಾಡಿದರು. ಈ ವೇಳೆ ಕರಾವಳಿ ಭಾಗದ ಯಕ್ಷಗಾನ ತಾಳಮದ್ದಳೆ ಕಲಾವಿದರಿಗೆ ಸರಕಾರದಿಂದ ಇನ್ನು ಮುಂದೆ ಹೆಚ್ಚು ಹೆಚ್ಚು ಪೆÇ್ರೀತ್ಸಾಹ ಹಾಗೂ ಪ್ರಶಸ್ತಿ ನೀಡಬೇಕು ಹಾಗೆ ಕಲಾವಿದರನ್ನು ಬೆಳೆಸೋಣ ಎಂದು ಸಭೆಯಲ್ಲಿ ನುಡಿದರು.
ಈ ಸುಂದರ ವೇದಿಕೆಯಲ್ಲಿ ನಾಗೂರು ದಯಾನಂದ ಬಳಗಾರ್ ಅವರಿಗೆ ತೆಕ್ಕಟ್ಟೆ ಆನಂದ ಮಾಸ್ಟರ್ ಕಲಾತಪಸ್ವಿ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯಿತು ಹಾಗೆ ರಂಗಸ್ಥಳ ಫೌಂಡೇಷನ್ ಟ್ರಸ್ಟ್ (ರಿ) -ಉಳ್ಳೂರು-74 ರ ವಾರ್ಷಿಕ ಸಡಗರ & ಕಾರುಣ್ಯನಿಧಿ ಸಮರ್ಪಣೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗೊಡೆಗೊಳಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ,ಉಮೇಶ್ ಕೋಟ ವೈಕುಂಠ ಉದ್ಯಮಿ ಬೆಂಗಳೂರು,ಟಿ ಸುನಂದಾ ಆನಂದರಾಯ ಶ್ಯಾನುಭಾಗ್ ನಾಗೂರು, ಅಶೋಕ್ ಭಟ್ ಉಜಿರೆ ಅರ್ಥಧಾರಿಗಳು.
ಶ್ರೀ ದಯನಂದ್ ಬಳೆಗಾರ ನಾಗೂರು , ಸಂಘದ ಸರ್ವ ಸದಸ್ಯರು ,ಯಕ್ಷ ಅಭಿಮಾನಿಗಳು ಉಪಸ್ಥಿತರಿದ್ದರು.