ಅರ್ಕುಳ ಮತ್ತು ಅಡ್ಯಾರು ಗ್ರಾಮ ‘ಮಂಗಳೂರು ಎ’ ಹೋಬಳಿಗೆ ಸೇರ್ಪಡೆ

ಅರ್ಕುಳ ಮತ್ತು ಅಡ್ಯಾರು ಗ್ರಾಮಗಳನ್ನು ಮಂಗಳೂರು ಎ ಹೋಬಳಿಗೆ ಸೇರ್ಪಡೆಗೊಳಿಸಬೇಕೆಂಬ ಈ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಮನಗಂಡು ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಇದನ್ನು ಸಕರಾತ್ಮಕವಾಗಿ ಪರಿಗಣಿಸಿದ ಸರ್ಕಾರ ಗುರುಪರ ಹೋಬಳಿಯಿಂದ ಈ ಗ್ರಾಮಗಳನ್ನು ಕೈಬಿಟ್ಟು ಮಂಗಳೂರು ಎ ಹೋಬಳಿಗೆ ಸೇರ್ಪಡೆಗೊಳಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿ ಆದೇಶ ಹೊರಡಿಸಲಾಗಿರುತ್ತದೆ ಎಂದು ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.

ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಮಂಗಳೂರು ತಾಲೂಕು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಡ್ಯಾರು ಮತ್ತು ಅರ್ಕುಳ ಗ್ರಾಮಗಳು ಗುರುಪುರ ಹೋಬಳಿಗೆ ಸೇರಿದ್ದು, ಸದರಿ ಗ್ರಾಮಗಳ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ನಾಡಾ ಕಚೇರಿಗೆ ಹೋಗಬೇಕಾದ ಸಂದರ್ಭಗಳಲ್ಲಿ ಮಂಗಳೂರಿಗೆ ಬಂದು ಅಲ್ಲಿಂದ ಗುರುಪುರಕ್ಕೆ ಹೋಗಬೇಕಾಗಿರುತ್ತದೆ. ಇದರಿಂದಾಗಿ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದರು. ಈ ಭಾಗದ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಇದೀಗ ಮಂಗಳೂರು ಎ ಹೋಬಳಿಗೆ ಸೇರ್ಪಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದರು.

Related Posts

Leave a Reply

Your email address will not be published.