ಅಸೈಗೋಳಿ: ರಿಕ್ಷಾ ಚಾಲಕ ಆತ್ಮಹತ್ಯೆ

ಮುಡಿಪು: ಕೊಣಾಜೆ ಅಸೈಗೋಳಿ ನಿವಾಸಿ ನಾರಾಯಣ(54) ಎಂಬುವವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಅಸೈಗೋಳಿಯಲ್ಲಿ ರಿಕ್ಷಾಚಾಲಕರಾಗಿದ್ದ ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ. ಅವರು ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಇವರು ಕೆಲವು ತಿಂಗಳಷ್ಟೇ ಹೊಸ ರಿಕ್ಷಾ ಖರೀದಿಸಿದ್ದರು.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Related Posts

Leave a Reply

Your email address will not be published.