ಫೆ. 12, ಅತಿರುದ್ರ ಮಹಾಯಾಗ ಪ್ರಯುಕ್ತ “ಸಮರ್ಪಣಾ ದಿವಸ” ಕಾರ್ಯಕ್ರಮ

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗ ಪ್ರಯುಕ್ತ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಮತ್ತು ಅತಿರುದ್ರ ಮಹಾಯಾಗ ಸಮಿತಿ ವತಿಯಿಂದ ಫೆಬ್ರವರಿ 12, 2023 ರ ಭಾನುವಾರದಂದು ಮಣಿಪಾಲ ಸರಳೇಬೆಟ್ಟುವಿನ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇಗುಲದ ಸನಿಹದಲ್ಲಿರುವ ಯಾಗ ಮಂಟಪದ ಬಳಿ “ಸಮರ್ಪಣಾ ದಿವಸ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. “ಅತಿರುದ್ರ ಮಹಾಯಾಗ”ಕ್ಕೆ ಶುದ್ಧ ತುಪ್ಪ, ಎಳ್ಳು, ಭತ್ತ, ಎಳ್ಳೆಣ್ಣೆ, ಗೇರುಬೀಜ, ಒಣದ್ರಾಕ್ಷಿ, ತೆಂಗಿನಕಾಯಿ, ಅಕ್ಕಿ ಬೃಹತ್ ಪ್ರಮಾಣದಲ್ಲಿ ಅತ್ಯಾವಶ್ಯವಾಗಿದ್ದು, ಭಕ್ತಾದಿಗಳಿಂದ ಸೇವಾರೂಪದಲ್ಲಿ ಸ್ವೀಕರಿಸಲಾಗುವುದು. ಭಕ್ತಾದಿಗಳು ಈ ಮಹಾತ್ಕಾರ್ಯದಲ್ಲಿ ಪಾಲ್ಗೊಂಡು ಯಾಗಕ್ಕೆ ಬೇಕಾಗುವ ವಸ್ತುಗಳನ್ನು ಅಥವಾ ರಶೀದಿ ಮಾಡುವ ಮೂಲಕ ಸೇವಾ ರೂಪದಲ್ಲಿ ನೀಡಬೇಕೆಂಬುದು ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ವಿನಂತಿ. ಈ ಸಮರ್ಪಣೆಯು ಫೆಬ್ರವರಿ 12, 2023 ರಂದು ಪ್ರಾರಂಭಗೊಂಡು ಮಾರ್ಚ್ 04, 2023 ರವೆಗೆ ಇರಲಿದೆ. ಸೇವೆಗೆ ಬೇಕಾಗುವ ವಸ್ತುಗಳು ದೇವಸ್ಥಾನದ ಸಮರ್ಪಣಾ ಕೌಂಟರ್ ನಲ್ಲಿ ಪ್ರತೀದಿನ ಲಭ್ಯವಿರುತ್ತದೆ
