Home Articles posted by v4team

ಚುನಾವಣಾ ಆಯೋಗದ ನಿಯಮ ಮೀರಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ : ಜುಬಿನ್

ಪುತ್ತೂರು: ಏಪ್ರಿಲ್ 26ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನ ಸಂದರ್ಭದಲ್ಲಿ ಪ್ರತೀ ಮತಗಟ್ಟೆಯ ಹೊರಗೆ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ತಮ್ಮದೇ ಆದ ಬೂತ್ ತೆರೆಯಲು ಅವಕಾಶವಿದ್ದರೂ ಇದಕ್ಕೆ ಕಟ್ಟುನಿಟ್ಟಿನ ನಿಯಮಗಳು ಅನ್ವಯವಾಗುತ್ತವೆ ಎಂದು ಪುತ್ತೂರು ಸಹಾಯಕ ಆಯುಕ್ತರೂ, ಸಹಾಯಕ ಚುನಾವಣಾ ಅಧಿಕಾರಿಗಳೂ ಆಗಿರುವ ಜುಬಿನ್ ಮೊಹಾಪಾತ್ರ ಹೇಳಿದರು.

ಬಡಗುತಿಟ್ಟಿನ ಯಕ್ಷಗಾನದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

ಬಡಗುತಿಟ್ಟಿನ ಯಕ್ಷಗಾನದ ಪ್ರಸಿದ್ಧ ಹಾಗೂ ಜನಪ್ರಿಯ ಭಾಗವತರಾಗಿದ್ದ ಸುಬ್ರಹ್ಮಣ್ಯ ಧಾರೇಶ್ವರ ಅವರು ಇಂದು ಮುಂಜಾಜೆ ಬೆಂಗಳೂರಿನ ಅವರ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ ಅವರಿಗೆ 67 ವರ್ಷ ಪ್ರಾಯವಾಗಿತ್ತು. ಯಕ್ಷಗಾನ ರಂಗ ಕಂಡ ಪ್ರಯೋಗಶೀಲ ಭಾಗವತರಾಗಿದ್ದ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿದ್ದರು. ಪೆರ್ಡೂರು ಮೇಳವೊಂದರಲ್ಲೇ 28 ವರ್ಷ ಪ್ರಧಾನ ಭಾಗವತರಾಗಿ ಸೇವೆ

ಉಡುಪಿ ಚಿಕ್ಕಮಂಗಳೂರು ಲೋಕಸಭಾ ಚುನಾವಣೆ ಹಿನ್ನೆಲೆ : ಕಾರ್ಕಳದಲ್ಲಿ ಸಿದ್ಧತೆ

ಕಾರ್ಕಳ: ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಿದ್ಧತೆಗಳು ಪೂರ್ಣಗೊಂಡಿದೆ. ಕಾರ್ಕಳದಲ್ಲಿ ಒಟ್ಟು 209 ಮತಗಟ್ಟೆಗಳಿದ್ದು, 1000 ಚುನಾವಣಾ ಅಧಿಕಾರಿಗಳು ನಿಯುಕ್ತಿಗೊಂಡಿದ್ದಾರೆ. 587 ಸಹಾಯಕರಿದ್ದು 57 ಬಸ್‌ಗಳು 21 ಸೆಕ್ಟರ್ ಅಧಿಕಾರಿಗಳಿದ್ದು ಕಾರ್ಕಳ ಎಂಪಿಎಂ ಕಾಲೇಜಿನಲ್ಲಿ ಸಿದ್ಧತೆಗಳು ನಡೆದು ಪೂರ್ಣಗೊಂಡಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದರು.

ನರೇಂದ್ರ ಮೋದಿ ಒಬ್ಬ ಹಿಟ್ಲರ್: ವೀರಪ್ಪ ಮೊಯ್ಲಿ

ಕೇಂದ್ರದಲ್ಲಿ ಹಿಟ್ಲರ್ ಸರ್ಕಾರವಿದೆ. ನರೇಂದ್ರ ಮೋದಿ ಒಬ್ಬ ಹಿಟ್ಲರ್, ಅವರ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಉದ್ದೇಶವಾಗಿದೆ ಎಂದು ಮಾಜಿ ಸಿಎಂ,ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಅವರು ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮೀನುಗಾರರಿಗೆ ಯಾವ ಸೌಕರ್ಯಗಳನ್ನು ಕೂಡ ಬಿಜೆಪಿ ಸರ್ಕಾರ ಕಲ್ಪಿಸಿಲ್ಲ. ಮಂಗಳೂರಿನ ಅಳಿವೆ ಬಂದರಿನಲ್ಲಿ ಹೂಳೆತ್ತುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಉಡುಪಿ,

ದ.ಕ ದಲ್ಲಿ ಮತದಾನಕ್ಕೆ ಎಲ್ಲಾ ಸಿದ್ಧತೆ ಪೂರ್ಣ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಎ.26ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎ.೨೪.ರಂದು ಸಂಜೆ 6ಗಂಟೆಗೆ ಎಲ್ಲಾ ರೀತಿಯ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.ಎ.26ರಂದು ದಕ್ಷಿಣ ಕನ್ನಡ ಜಿಲ್ಲೆಯ 1876ಮತಗಟ್ಟೆಗಳಲ್ಲಿ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಮತದಾನ ನಡೆಸಲು ಎಲ್ಲಾ ಸಿದ್ದತೆ ಪೂರ್ಣ ಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಹಾಗೂ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ

ಬೈಂದೂರಿನಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾದ ಬೃಹತ್ ಸಮಾವೇಶ

ಬೈಂದೂರು : ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ವತಿಯಿಂದ ಎಸ್.ಟಿ ಮೋರ್ಚಾದ ಬೃಹತ್ ಸಮಾವೇಶವು ತೆಗ್ಗರ್ಸೆಯ ಗುಡ್ಡೆಯಂಗಡಿ ಫಾರ್ಮ್ ಹೌಸ್ ನಡೆಯಿತು. ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ಶೃತಿ ಅವರು, ಎಸ್‌ಟಿ ಮೋರ್ಚಾದ ಬೃಹತ್ ಸಮಾವೇಶ ಉದ್ಘಾಟಿಸಿ, ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್‌ಗೆ ಕಳುಹಿಸುವ ಕೆಲಸ ನಿಮ್ಮದು ಎಂದರು. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದ

ಭಾರತದ ಮೀನು ಮಾಂಸ ಪ್ರಸಾದದ ಆಲಯಗಳು

ಇತ್ತೀಚೆಗೆ ದೇಶದ ನಿಜ ಪರಂಪರೆ ಮತ್ತು ಭಾರತೀಯರ ದಿಟ ಸಂಸ್ಕøತಿಯ ಬಗೆಗೆ ಅರಿವಿಲ್ಲದವರು ಮೀನು ಮಾಂಸದ ಬಗೆಗೆ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿಯವರೇ ಮಾಂಸ ತಿಂದು ಹಬ್ಬ ಮಾಡಿದರು; ಮೀನು ತಿಂದು ಉತ್ಸವ ನೋಡಿದರು ಎಂದಿತ್ಯಾದಿಯಾಗಿ ಟೀಕಿಸಿದ್ದಾರೆ. ಇಡೀ ಮಾನವ ಕುಲವೇ ಆದಿ ಯುಗದಲ್ಲಿ ಎರಡೇ ಕೆಲಸ ಮಾಡುತ್ತಿದ್ದುದು. ಒಂದು ಬೇಟೆಯಾಡುವುದು, ಎರಡು ನಿಸರ್ಗದಲ್ಲಿ ಸಿಗುವುದನ್ನು ಸಂಗ್ರಹಿಸುವುದು. ಬೇಟೆಯಾಡುವುದು ಏಕೆ ಎಂದು

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗ್ಯಾರಂಟಿ ಯೋಜನೆ ವಿಸ್ತರಣೆ : ಪದ್ಮಪ್ರಸಾದ್ ಜೈನ್

ಮೂಡುಬಿದಿರೆ: 2004 ರ ಲೋಕಸಭಾ ಚುನಾವಣೆಯಲ್ಲಿ ಯಾವ ಫಲಿತಾಂಶ ಕಾಂಗ್ರೆಸ್ ಗೆ ಸಿಕ್ಕಿತ್ತೋ ಅದೇ ರೀತಿಯ ಫಲಿತಾಂಶ ಈಬಾರಿ ಕಾಂಗ್ರೆಸ್ ನೇತೃತ್ವದ ಐ.ಎನ್.ಡಿ.ಐ.ಎ ಗೆ ಸಿಗಲಿದ್ದು ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅನುಷ್ಠಾನ ಮಾಡಿರುವ ಎಲ್ಲ ಗ್ಯಾರಂಟಿಗಳನ್ನು ದೇಶದಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ತರಲಾಗುವುದೆಂದು ಕೆಪಿಸಿಸಿ ರಾಜ್ಯ ವಕ್ತಾರ ಪದ್ಮಪ್ರಸಾದ್ ಜೈನ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಂಗಳವಾರ

ವಿಟ್ಲ: ಬಾವಿಗೆ ರಿಂಗ್‌ ಹಾಕುವಾಗ ಆಕ್ಸಿಜನ್‌ ಸಿಗದೇ ಇಬ್ಬರು ಮೃತ್ಯು

ವಿಟ್ಲ: ಬಾವಿಗೆ ರಿಂಗ್‌ ಹಾಕುವಾಗ ಆಕ್ಸಿಜನ್‌ ಸಿಗದೇ ಇಬ್ಬರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದೆ. ಮೃತ ಕಾರ್ಮಿಕರನ್ನು ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ(40) ಮತ್ತು ಮಲಾರ್‌ ನಿವಾಸಿ ಆಲಿ(24) ಎಂದು ಗುರುತಿಸಲಾಗಿದೆ. ಸುಮಾರು30 ಫೀಟ್‌ ಆಳದ ಬಾವಿಗೆ ರಿಂಗ್‌ ಹಾಕಿ ನಂತರ ಕ್ಲೀನಿಂಗ್‌ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಬಾವಿಗೆ ಇಳಿದವನು

ಬೈಂದೂರು : ನಾರಿ ಶಕ್ತಿ ಮಹಿಳಾ ಸಮಾವೇಶ

ಬೈಂದೂರು ವಿಧಾನ ಸಭಾ ಕ್ಷೇತ್ರದ ಕಿರಿ ಮಂಜೇಶ್ವರದಲ್ಲಿ ನಾರಿ ಶಕ್ತಿ ಮಹಿಳಾ ಸಮಾವೇಶ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಮಾತನಾಡಿ, ಮಹಿಳೆಯರ ಕಲ್ಯಾಣಕ್ಕಾಗಿ ಮೋದಿ ಸರಕಾರ ಶೇಕಡಾ 33% ಮೀಸಲಾತಿಯನ್ನು ನೀಡಿದೆ. ಯಡಿಯೂರಪ್ಪ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ನಲ್ಲಿ ಶೇಕಡಾ 50% ಮೀಸಲಾತಿ ನೀಡುವುದರ ಮೂಲಕ ಮಹಿಳೆಯರ ಪರ