ಫೆ. 12, “ಶಿವೋತ್ಸವ ಬಾಲಶಿವ” ಎಂಬ ವೇಷಭೂಷಣ ಸ್ಪರ್ಧೆ

ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್, ಶಿವಪಾಡಿ ಮತ್ತು ಅತಿರುದ್ರ ಮಹಾಯಾಗ ಸಮಿತಿ ವತಿಯಿಂದ ಶಿವಪಾಡಿಯಲ್ಲಿ ಶಿವೋತ್ಸವ. ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪುಟಾಣಿಗಳಿಗಾಗಿ “ಶಿವೋತ್ಸವ ಬಾಲಶಿವ” ಎಂಬ ವೇಷಭೂಷಣ ಸ್ಪರ್ಧೆಯನ್ನು ಫೆಬ್ರವರಿ 12, 2023 ರ ಭಾನುವಾರದಂದು ಮಣಿಪಾಲದ ಸರಳೇಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ. 1 ರಿಂದ 12 ವರ್ಷದ ಮಕ್ಕಳಿಗೆ ಬಾಲಶಿವನ ವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಸದಾವಕಾಶ. ಈ ಸ್ಪರ್ಧೆಯು 1 ರಿಂದ 4 ವರ್ಷದ ಪುಟಾಣಿಗಳಿಗೆ “ಸಬ್ ಜೂನಿಯರ್”, 4 ರಿಂದ 8 ವರ್ಷದ ಮಕ್ಕಳಿಗೆ “ಜೂನಿಯರ್” ಮತ್ತು 8 ರಿಂದ 12 ವರ್ಷದ ಮಕ್ಕಳಿಗೆ “ಸೀನಿಯರ್” ಎಂಬ ಮೂರು ವಿಭಾಗಗಳಲ್ಲಿ ಆಯಾ ಸಮಯನ್ನು ನಿಗಧಿ ಪಡಿಸಿ ನಡೆಯಲಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಪುಟಾಣಿಗಳಿಗೆ ಆಕರ್ಷಕ ನಗದು ಬಹುಮಾನ ಹಾಗೂ ಫಲಕವನ್ನು ನೀಡಲಾಗುತ್ತದೆ. ಇನ್ನು ಮೂರು ವಿಭಾಗಗಳಲ್ಲಿಯೂ ತಲಾ ಹತ್ತು ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ.

ಸ್ಪರ್ಧೆಯ ನಿಯಮಗಳು:

  • ಪುಟಾಣಿಗಳ ವಯಸ್ಸಿನ ಪುರಾವೆ (age proof) ತರತಕ್ಕದ್ದು.
  • ಬಾಲಶಿವನ ವೇಷಧಾರಿಗಳಾಗಿರಬೇಕು
  • ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕುದ್ದು (ನೀರು, ಬೆಂಕಿ ಹಾಗೂ ಸುಡುಮದ್ದು ಬಳಸುವಂತಿಲ್ಲ)
  • ಸ್ಪರ್ಧೆಯ ಫಲಿತಾಂಶಗಳನ್ನು ವೇಷ ಭೂಷಣ, ಅಭಿನಯ ಹಾಗೂ ಸೃಜನಶೀಲತೆ ಪರಿಗಣಿಸಿ ಸ್ಥಳದಲ್ಲೇ ಅಂದೇ ಬಹುಮಾನಗಳನ್ನು ನೀಡಲಾಗುವುದು.
  • ನಿರ್ಣಾಯಕರ ತೀರ್ಮಾನವೇ ಅಂತಿಮ
  • ನೋಂದಾವಣೆಗಾಗಿ: QRನ್ನು Scan ಮಾಡಿ ಅಥವಾ ಕರೆಮಾಡಿ: 7899476670
    ಅಥವಾ ಈ ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ನೀವೇ ನೋಂದಾವಣೆ ಮಾಡಿಕೊಳ್ಳಿ 👇

Related Posts

Leave a Reply

Your email address will not be published.