ಬಾಯೋ ಚಿತ್ರ ನೋಡಿ ಭಾವುಕರಾದ ಹಿರಿಯ ಮಹಿಳೆ
ಬಾಯೋ ಚಿತ್ರ ನೋಡಿ ಹಿರಿಯ ಮಹಿಳೆಯೊಬ್ಬರು ಕಣ್ಣೀರು ಸುರಿಸಿದ ಘಟನೆ ನಿನ್ನೆಯ ಪ್ರಿಮಿಯರ್ ಮಣಿಪಾಲ ಭಾರತ್ ಸಿನಿಮಾಸ್‍ನಲ್ಲಿ ನಡೆದಿದೆ. ಭಾರತ್ ಸಿನಿಮಾಸ್ನಲ್ಲಿ ನಡೆದ ಎಲ್ಲರ ಮನ ಮುಟ್ಟುವ ಘಟನೆ ಬಾಯೋ ಆಮ್ಚೆ ಚೇಡು ಚಿತ್ರದ ಪ್ರಿಮಿಯಾರ್ ಪ್ರದರ್ಶನ ನೋಡಿ ಹೊರಗೆ ಬಂದ ಹಿರಿಯ ಮಹಿಳೆಯೊಬ್ಬರು ಸಿನಿಮಾ ಹೇಗಿತ್ತು ಅಂತ ಕೇಳಿದಾಗ ಜೋರಾಗಿ ಅತ್ತು ಚಿತ್ರವನ್ನು ತನ್ನದೇ ಕಥೆ ಎಂಬ ಹಾಗೆ ಅಂದುಕೊಂಡು ಭಾವುಕರಾದರು. ಚಿತ್ರದಲ್ಲಿ ಬರುವ ಭಾವನಾತ್ಮಕ ಸನ್ನಿವೇಶ. ಪ್ರತಿ ಪಾತ್ರವು ಅವರ ಮನ ಮುಟ್ಟಿತ್ತು. ತನ್ನ ಮಕ್ಕಳನ್ನು ಪ್ರೀತಿಯಿಂದ ಸಾಕಿ ಸಲಹಿದರೂ ಮಕ್ಕಳು ಒಂದು ಫೆÇೀನ್ ಕೂಡ ಮಾಡಲ್ಲ. ಇನ್ನೊಮ್ಮೆ ಚಿತ್ರ ನೋಡಬೇಕು ಅಂತ ಅನಿಸ್ತಿದೆ ಆದ್ರೆ ದುಃಖ ತಡೆದು ಕೊಳ್ಳಲು ಆಗುತಿಲ್ಲ. ಪ್ರಪಂಚದಲ್ಲಿ ಯಾರಿಗೂ ಯಾರು ಇಲ್ಲದಿದ್ದರೂ ದೇವರಿದ್ದಾನೆ ಎಂದು. ನೀವು ತಿಳಿಸಿ ಕೊಟ್ಟಿದ್ದೀರಿ ಎಂದು ಭಾವುಕರಾದರು. ಚಿತ್ರ ಹೇಗಿದೆ ಎನ್ನುವುದಕ್ಕೆ ಈ ಒಂದು ಸನ್ನಿವೇಶವೇ ಸಾಕು.